ನ್ಯೂಸ್

ಎನಿ ಟೈಮ್​ ಥಿಯೇಟರ್​​ನಲ್ಲಿ (ATT) ಕನ್ನಡದ ದಿ ಪೈಂಟರ್ ಚಿತ್ರ ಬಿಡುಗಡೆ

manjunathktgns

ಕರೊನಾ ಸಂದರ್ಭದಲ್ಲಿ ಕನ್ನಡದ ಚಿತ್ರ ದಿ ಪೈಂಟರ್ ಬಿಡುಗಡೆಯ ಸಂಭ್ರಮದಲ್ಲಿದೆ. ಆಗಸ್ಟ್ 14 ರಂದು ರಾತ್ರಿ 9 ಘಂಟೆಗೆ shreyaset.com ATT (ಎನಿ ಟೈಮ್​ ಥಿಯೇಟರ್​) ನಲ್ಲಿ ಚಿತ್ರ ರಿಲೀಸ್ ಆಗಲಿದೆ. ಇದು ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ.

ಕೆಲವು ದಿನಗಳ ಹಿಂದೆ ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು. ಟ್ರೇಲರ್​ಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ATT ಎಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಕನ್ನಡ ಚಿತ್ರ ಇದಾಗಿದ್ದು, ನೋಡುಗರು 50 ರೂ ನೀಡಿ ಈ ಸಿನಿಮಾ ವೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕ ವೆಂಕಟ್​ ಭಾರದ್ವಾಜ್​.

ಈ ಚಿತ್ರವನ್ನು ಸಂಪೂರ್ಣವಾಗಿ ಲಾಕ್​ಡೌನ್​ ವೇಳೆ ಚಿತ್ರೀಕರಣ ಮಾಡಲಾಗಿದ್ದು, ಸಾಮಾಜಿಕ ತಾಣದಲ್ಲಿ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗಬಹುದು ಎಂಬ ಭರವಸೆ ನಿರ್ದೇಶಕರದ್ದು. ಅಚ್ಚರಿ ಏನೆಂದರೆ, ಈ ಸಿನಿಮಾದಿಂದ ಬರುವ ಆದಾಯದಲ್ಲಿ ಶೇಕಡಾ 20 ಮೊತ್ತವನ್ನು ಸಂಕಷ್ಟದಲ್ಲಿರುವ ಕನ್ನಡ ಚಿತ್ರ ಕಾರ್ಮಿಕರಿಗೆ ಕೊಡುವುದಾಗಿ ತಂಡ ಹೇಳಿಕೊಂಡಿದೆ.

ದಿ ಪೈಂಟರ್ ಚಿತ್ರದಲ್ಲಿ 40ಕ್ಕೂ ಹೆಚ್ಚು ನಟರು ಹಾಗೂ ತಂತ್ರಜ್ಞರು ಶ್ರಮಿಸಿದ್ದಾರೆ. ಚಂದನ್ ಪಿ ರವರ ಸಂಕಲನ, ಲವ್ ಪ್ರಾಣ್ ಮೆಹ್ತಾ ಸಂಗೀತ ನೀಡಿದ್ದಾರೆ. ಡಾ. ರಾಜ್ ಕಮಲ್ ಬಂಡವಾಳ ಹೂಡಿದ್ದಾರೆ.

ಈ ಚಿತ್ರವನ್ನು shreyaset.com google ಸ್ಟೋರ್ ನಲ್ಲಿ ಡೌನ್​ಲೋಡ್​ ಮಾಡಿ 50 ರೂ ಹಣ ಪಾವತಿ ಮಾಡಿ ನೋಡಬಹುದಾಗಿದೆ. ಈ ಚಿತ್ರದ ಲೈಸೆನ್ಸ್ 48 ಗಳ ಕಾಲ ಚಾಲ್ತಿಯಲ್ಲಿರಲಿದೆ. ಈ ಚಿತ್ರವನ್ನು ಮೊಬೈಲ್​, ಟಿವಿ ಮತ್ತು ಕಂಪ್ಯೂಟರ್​ನಲ್ಲಿ ನೋಡಬಹುದು. ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಶಿನವ್, ವೆಂಕಟ್ ಶಾಸ್ತ್ರೀ, ಶಮೀಕ್, ಕಬೀರ್, ಉಮಾ, ಮಧುರ, ಶಮಾ, ಮಣಿಮಾರನ್ ನಟಿಸಿದ್ದಾರೆ.