ನ್ಯೂಸ್

ಬಾವನ ಮದುವೆಗೆಂದು ಅತ್ತೆ ಮನೆಗೆ ಬಂದವನು ಮಸಣ ಸೇರಿದ! ಸರ್ಕಾರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ

ಪಟನಾ: ಅತ್ತೆ ಮಗನ ಮದುವೆಗೆಂದು ಅತ್ತೆ ಮನಗೆ ಬಂದ ಯುವಕ ಮಸಣ ಸೇರಿರುವ ಘಟನೆ ಬಿಹಾರದ ಸುಗೌಲಿಯ ಶ್ರೀರಾಮ್​ಪುರದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಯುವಕನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ನೂತಾನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಯುವಕ ಡಿಸೆಂಬರ್​ 11ರಂದು ಶ್ರೀರಾಮ್​ಪುರಕ್ಕೆ ಬಂದಿದ್ದ. ಅದೇ ದಿನ ಮದುವೆ ನಡೆದಿದ್ದು, ಅದಾದ ನಂತರ ಯುವಕ ಅದೇ ಮನೆಯಲ್ಲಿ ತಂಗಿದ್ದ. ಆದರೆ ಸೋಮವಾರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ. ಮನೆಯಲ್ಲಿ ಎಲ್ಲಿಯೂ ಸಿಗದಿದ್ದಾಗ, ಊರಲ್ಲೆಲ್ಲ ಹುಡುಕಾಡಲಾಗಿದೆ.

ಆಗ ಯುವಕ ಸರ್ಕಾರಿ ಶಾಲಾ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗ್ರಾಮಸ್ಥರು ಬಂದು ತಿಳಿಸಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ, ಪೊಲೀಸರು ಬಂದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮದುವೆಗೆ ಬಂದವನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್​)