ವಯ್ನಾಡು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರದಂದು ಮತ್ತೊಮ್ಮೆ ಕೃಷಿ ಕಾಯ್ದೆ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ. ದೇಶದ ಪ್ರತಿಯೊಬ್ಬ ರೈತರಿಗೆ ಕೃಷಿ ಕಾಯ್ದೆ ಬಗ್ಗೆ ಅರ್ಥವಾಗಿದ್ದರೆ ಪೂರ್ತಿ ದೇಶವೇ ಹೊತ್ತಿ ಉರಿಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎರಡು ಸಲ ತಾಳಿ ಕಿತ್ತೆಸೆದರೂ ಬಿಡಲಿಲ್ಲ, ನನಗಾದ ಅನ್ಯಾಯ ಯಾರಿಗೂ ಆಗಬಾರದು: ಎಲ್ಲ ಹೇಳಿಕೊಂಡ ಸಂತ್ರಸ್ತೆ…
ಕೃಷಿ ಕಾಯ್ದೆಯ ಬಗ್ಗೆ ನಿಜವಾದ ಅಂಶವೇನೆಂದರೆ, ಕಾಯ್ದೆ ಬಗ್ಗೆ ಬಹುತೇಕ ರೈತರಿಗೆ ಮಾಹಿತಿಯೇ ಇಲ್ಲ. ಅದಕ್ಕಾಗಿ ಅವರು ಹೋರಾಟದಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ಪ್ರತಿಯೊಬ್ಬ ರೈತನಿಗೂ ಕಾಯ್ದೆ ಅರ್ಥವಾಗಿದ್ದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಪೂರ್ತಿ ದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು ಎಂದು ಅವರು ಹೇಳಿದ್ದಾರೆ. ಅವರ ಲೋಕಸಭಾ ಕ್ಷೇತ್ರವಾಗಿರುವ ಕೇರಳದ ವಯ್ನಾಡಿನ ಕಲ್ಪೆಟ್ಟಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. (ಏಜೆನ್ಸೀಸ್)