ನ್ಯೂಸ್

ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ

ಕಲಬುರಗಿ: ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲ ಎಂದು ಶಾಲಾ‌ ವಿದ್ಯಾರ್ಥಿನಿಯರೊಂದಿಗೆ ಬಸ್ ಚಾಲಕ ಅಸಭ್ಯವಾಗಿ ವರ್ತಿಸಿದ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ನಡೆದಿದೆ.

ವಿದ್ಯಾರ್ಥಿನಿಯೊಬ್ಬಳು ತಮ್ಮೂರಿಗೆ ಹೋಗಲು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದಳು. ಈ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ನೀನು ಮುಸ್ಲಿಂ ಅಲ್ವಾ?..ಬುರ್ಖಾ ಧರಿಸಿ ಬಾ..ಆಗ ಮಾತ್ರ ಬಸ್ ಹತ್ತಲು ಬಿಡುತ್ತೇನೆ. ಬುರ್ಖಾ ಧರಿಸಿಯೇ ಬನ್ನಿ ಎಂದು ಚಾಲಕ ವಿದ್ಯಾರ್ಥಿನಿಯನ್ನ ಬಸ್‌ನಿಂದ ಕೆಳಗಿಳಿಸಿದ್ದಾನೆ.

ಈ ವೇಳೆ ಶಿಕ್ಷಕರು ಮತ್ತು ಬಸ್ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. KA 38 F 1074 ಬಸವಕಲ್ಯಾಣ-ಕಲಬುರಗಿ ಮಧ್ಯೆ ಸಂಚಿರಿಸುವ ಬಸ್‌‌ನಲ್ಲಿ ಈ ಘಟನೆ ನಡೆದಿದೆ.

ಏಕ ವಚನದಲ್ಲಿ ಬೈಯ್ದು ಉಳಿದ ವಿದ್ಯಾರ್ಥಿನಿಯರನ್ನು ಚಾಲಕ ಕೆಳಗಿಳಿಸಿದಾರೆಂದು ವಿದ್ಯಾರ್ಥಿನಿಯರ ಆರೋಪ ಮಾಡಿದ್ದಾರೆ.