More

    ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗುತ್ತಿದ್ದಂತೆ, ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಚಿಹ್ನೆ ಬಗ್ಗೆ ಭಾರಿ ಚರ್ಚೆ

    ನವದೆಹಲಿ: ಸೋಶಿಯಲ್​​​ ಮೀಡಿಯಾ ವೇದಿಕೆಯಲ್ಲಿ ಒಂದಾಗಿರುವ ಟ್ವಿಟ್ಟರ್ ಲೋಗೋ ‘ಎಕ್ಸ್’ ಆಗಿ ಬದಲಾಗಿದೆ. ಈ ಕುರಿತಾಗಿ ನಿನ್ನೆ ಕಂಪನಿ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ರೈಲಿನ ಹಿಂಭಾಗದಲ್ಲಿರುವ ‘ಎಕ್ಸ್’ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.

    train

    ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಈಗಿರುವ ಪಕ್ಷಿಯ ಲೋಗೋವನ್ನು ಬದಲಾಯಿಸಿ, ಈಗ X ಅಕ್ಷರವನ್ನು ಲೋಗೋ ಆಗಿ ಬಳಸಿದ್ದಾರೆ. ಈಗ ನೀವು ಟ್ವಿಟ್ಟರ್​​ನ್ನು ತೆರೆದರೆ, ನೀಲಿ ಹಕ್ಕಿಯ ಬದಲಿಗೆ ಎಕ್ಸ್ ಚಿಹ್ನೆಯನ್ನು ನೋಡುತ್ತೀರಿ. ಸದ್ಯ ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಇದೇ ವೇಳೆ ಭಾರತೀಯ ರೈಲ್ವೆ ಮತ್ತೊಂದು ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

    ನೈಋತ್ಯ ರೈಲ್ವೆ ಮಂಗಳವಾರ ಭಾರತೀಯ ರೈಲ್ವೆ, ರೈಲಿನ ಫೋಟೋವನ್ನು ಟ್ವೀಟ್ ಮಾಡಿದ್ದು, ಹಿಂಭಾಗದಲ್ಲಿ ದೊಡ್ಡ ಅಕ್ಷರದಲ್ಲಿ ಹಳದಿ ಬಣ್ಣದಿಂದ ‘X’ ಎಂದು ಬರೆಯಲಾಗಿದೆ. ಕೋಚ್ ಮೇಲಿರುವ ಎಕ್ಸ್ ಚಿಹ್ನೆಯ ಅರ್ಥವೇನು ಗೊತ್ತಾ?’ ಎಂದು ನೆಟ್ಟಿಗರಿಗೆ ಪ್ರಶ್ನಿಸಿದೆ. ಇದಕ್ಕೆ ನೆಟ್ಟಿಗರು ಮಾತ್ರ ವಿಭಿನ್ನವಾಗಿ ಕಾಮೆಂಟ್​​​ ಮಾಡುವ ಮೂಲಕವಾಗಿ ಚರ್ಚೆ ಹುಟ್ಟು ಹಾಕಿದ್ದಾರೆ.

    ರೈಲಿನ ಕೊನೆಯ ಬೋಗಿಯ ಹಿಂದೆ ಇರುವ ‘X’ ಚಿಹ್ನೆಯ ಬಗ್ಗೆ ರೈಲ್ವೇ ಸಚಿವಾಲಯ ಟ್ವಿಟ್ಟರ್‌ನಲ್ಲಿ ಈ ಹಿಂದೆಯೇ ಮಾಹಿತಿ ನೀಡಿದ್ದು, ಅಂತಿಮವಾಗಿ ಉತ್ತರವನ್ನು ಕಂಡು ಅನೇಕರು ನಿರಾಳರಾಗಿದ್ದಾರೆ. ಇದಕ್ಕೆ ನೆಟಿಜನ್‌ಗಳು ಕೂಡ ಭಾರೀ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯ ಪೋಸ್ಟ್ ಪ್ರಕಾರ, ರೈಲಿನ ಕೊನೆಯ ಕೋಚ್‌ನಲ್ಲಿರುವ ‘X’ ಅಕ್ಷರವು ಯಾವುದೇ ಕೋಚ್‌ಗಳನ್ನು ಬಿಡದೆ ರೈಲು ಹಾದುಹೋಗಿದೆ ಎಂದು ಸೂಚಿಸುತ್ತದೆ.’ ಇದನ್ನು ಗುರುತಿಸಲು ‘X’ ಎಂದು ಬರೆಯಲಾಗಿದೆ.

    ಕೊನೆಯ ರೈಲು ಬೋಗಿಯ ಹಿಂದೆ ಇರುವ ಹಳದಿ ಬಣ್ಣದಲ್ಲಿ ಬರೆದಿರುವ ‘X’ ಚಿಹ್ನೆಯು ಇದೇ ರೈಲಿನ ಕೊನೆಯ ಬೋಗಿಯಾಗಿದ್ದು, ಯಾವುದೇ ಕೋಚ್‌ಗಳನ್ನು ಬಿಡದೆ ರೈಲು ಹಾದುಹೋಗಿದೆ ಎಂದು ಸೂಚಿಸುತ್ತದೆ. ಇದರ ಹಿಂದೆ ಬೇರೆ ಕೋಚ್ ಇಲ್ಲ ಎಂಬುದನ್ನು ದೃಢಪಡಿಸಲು ರೈಲ್ವೆ ಅಧಿಕಾರಿಗಳಿಗೆ ಈ ಚಿಹ್ನೆ ಸಹಾಯ ಮಾಡುತ್ತದೆ.

    ರೈಲಿನ ಕೊನೆಯ ಬೋಗಿ ಹಿಂದೆ ಇರುವ ‘X’ ಚಿಹ್ನೆಯ ಅರ್ಥವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts