ದಾವಣಗೆರೆ: ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಫೆ 8, 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ಆದರೆ, ಈ ಬಾರಿ ನಟ ಕಿಚ್ಚ ಸುದೀಪ್ ಅವರಿಗೆ ಅಹ್ವಾನ ನೀಡಿಲ್ಲ. ಇದರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದೆ. ಸುದೀಪ್ ಅವರು ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗೊಂದಲಗಳ ಕಾರಣದಿಂದ ಅವರಿಗೆ ವಾಲ್ಮೀಕಿ ಜಾತ್ರೆಗೆ ಆಹ್ವಾನ ನೀಡದಿರಲು ನಿರ್ಧಾರ ಮಾಡಲಾಗಿದೆ.
ವಾಲ್ಮೀಕಿ ಮಠದಲ್ಲಿ ಎರಡು ದಿನಗಳ ಕಾಲ ನಡೆಯುವ ವಾಲ್ಮೀಕಿ ಜಾತ್ರೆಗೆ ಮಠ ಸಜ್ಜಾಗುತ್ತಿದೆ. ಹಿಂದಿನ ಜಾತ್ರೆಯಲ್ಲಿ ನಟ ಸುದೀಪ್ ಬಂದಿದ್ದರು. ಹೀಗೆ ಬಂದ ನಟನನ್ನ ನೋಡಲು ನೂಕುನುಗ್ಗಲು. ಜಾತ್ರೆಯಲ್ಲಿ ಗದ್ದಲ. ಕಳೆದ ಜಾತ್ರೆಗೆ ನಟ ಸುದೀಪ್ ಬಂದಿರಲಿಲ್ಲ. ಬರುತ್ತಾರಾ ಬರುತ್ತಾರೆ ಎಂಬ ಹೇಳಿಕೆಯಲ್ಲಿ ಜಾತ್ರೆ ಮುಕ್ತಾಯವಾಗಿತ್ತು. ವಾಲ್ಮೀಕಿ ಸಮಾಜದ ನಟ ಸುದೀಪ್ ನೋಡಲು ಜನ ಸಾಗರವೇ ಸೇರುತ್ತದೆ. ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗಲಾಟೆ ಗೊಂದಲಗಳಿಂದ ಸುದೀಪ್ ಕರೆಸದಿರಲು ಜಾತ್ರಾ ಕಮಿಟಿ ನಿರ್ಧಾರ ಮಾಡಿದೆ.
ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ 2023ರ ಫೆ.9ರಂದು ವಾಲ್ಮೀಕಿ ಜಾತ್ರೆಯ ಸಭಾ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಬರುತ್ತಾರೆ ಅಂತ ಹೇಳಲಾಗಿತ್ತು ಕೊನೆಗೆ ಸುದೀಪ್ ಬರಲ್ಲ ಎಂದು ಹೇಳುತಿದ್ದಂತೆ ಅಭಿಮಾನಿಗಳು ಚೇರ್ ಗಳ ಮುರಿದು ಆಕ್ರೋಶ ಹೊರ ಹಾಕಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.
ಈ ಹಿಂದೆ ಒಮ್ಮೆ ಸುದೀಪ್ ಬರುತಿದ್ದಂತೆ ಅಭಿಮಾನಿಗಳು ವೇದಿಕೆಗೆ ನುಗ್ಗಿ ಬಂದಿದ್ದರು. ಆಗ ಅಲ್ಲಿದ್ದ ಹಿರಿಯರು ಮಕ್ಕಳಿಗೆ ಗಾಯ ಕೂಡ ಆಗಿದ್ದವು. ಈ ಎಲ್ಲ ಗೊಂದಲಗಳಿಂದ ನಟ ಸುದೀಪ್ ಕರೆಸದಿರಲು ವಾಲ್ಮೀಕಿ ಜಾತ್ರ ಸಮಿತಿ ನಿರ್ಧರಿಸಿದೆ. ಅಚ್ಚುಕಟ್ಟಾಗಿ ಜಾತ್ರೆ ನಡೆಸುವ ಸಲುವಾಗಿ ಸುದೀಪ್ ರನ್ನು ಕರೆಸದಿರಲು ತೀರ್ಮಾನಿಸಲಾಗಿದೆ ಎಂದು ಪ್ರಸನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಹೇಳಿದ್ದಾರೆ.