ನ್ಯೂಸ್

ಬೊಲೆರೊ- ಲಾರಿ ನಡುವೆ ಭೀಕರ ಅಪಘಾತ; 9 ಮಂದಿ ದುರ್ಮರಣ | Accident

Accident: ಬೊಲೆರೊ ವಾಹನ ಲಾರಿ ನಡುವೆ ಶುಕ್ರವಾರ ಬೆಳಂ-ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ ಹೊಂದಿದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಬಲರಾಂಪುರ ಗ್ರಾಮದ ನಮ್ಶೋಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕುಟುಂಬದ ಸದಸ್ಯರೆಲ್ಲರೂ ಮದುವೆ ಸಮಾರಂಭದಿಂದ ಸಂತೋಷದಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಜಾರ್ಖಂಡ್‌ನ ನಿಮ್ದಿಹ್ ಅಡಬಾನಾ ಗ್ರಾಮದಿಂದ ತಿಲೈತಾಂಡ್‌ಗೆ ಹೋಗುತ್ತಿದ್ದಾಗ, ಬೊಲೆರೊ ವಾಹನವು ಅತಿ ವೇಗದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೊಲೆರೊ ವಾಹನವು ತುಂಡಾಗಿತ್ತು. ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಕೆಲವರು ಆಸ್ಪತ್ರೆಯಲ್ಲಿ ಅಸುನಿಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.