ನ್ಯೂಸ್

ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್​ನೋಟ್​ ಬರಹ!

ಹೈದರಾಬಾದ್​: ನವದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಕೊಟಗಿರಿ ಮಂಡಲದಲ್ಲಿ ಗುರುವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಡಗ ಸಾವಿಗೀಡಾದರೆ, ಆತನ ಪತ್ನಿಯ ಸ್ಥಿತಿ ಗಂಭೀರವಾಗಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಪ್ರಣೀತ್​ ಮತ್ತು ವಿಜಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪಾಲಕರ ಅನುಮತಿಯನ್ನು ಕೋರಿದ್ದರು. ಯಾವಾಗ ಪ್ರಣೀತ್​ ಕುಟುಂಬ ಮದುವೆ ವಿರೋಧಿಸಿತು ಇಬ್ಬರು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇಬ್ಬರ ಮದುವೆಗೆ ವಧು ವಿಜಯಾಳ ತಾಯಿ ಸಾವಿತ್ರಿ ಸಮ್ಮತವಿತ್ತು. ಬಳಿಕ ಪ್ರಣೀತ್​, ವಿಜಯಾ ಜತೆ ಅತ್ತೆ ಮನೆಯಲ್ಲೇ ವಾಸವಿದ್ದನು.

ಆದರೆ, ಇಬ್ಬರ ಸಂತೋಷ ಹೆಚ್ಚು ದಿನ ಇರಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಸಾವಿತ್ರಿ ಮಗಳು ಮತ್ತು ಅಳಿಯನಿಗೆ ಕಿರುಕುಳ ನೀಡಲು ಆರಂಭಿಸಿದರು. ಬಳಿಕ ಪ್ರಣೀತ್​, ವಿಜಯಾಳನ್ನು ಕರೆದುಕೊಂಡು ತನ್ನ ಮನೆ ಸೇರಿದ್ದ. ಆದರೂ ಸಾವಿತ್ರಿ ಇಬ್ಬರೊಂದಿಗೆ ಜಗಳ ಆಡುವುದನ್ನು ನಿಲ್ಲಿಸಿರಲಿಲ್ಲ. ಸಾವಿತ್ರಿಯ ವರ್ತನೆಯಿಂದ ಬೇಸತ್ತ ಪ್ರಣೀತ್​ ಮತ್ತು ವಿಜಯಾ ಡೆತ್​ನೋಟ್​ ಬರೆದಿಟ್ಟು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.

ಆತ್ಮಹತ್ಯೆ ಯತ್ನ ಬಗ್ಗೆ ತಿಳಿದ ಪ್ರಣೀತ್​ ಪಾಲಕರು ತಕ್ಷಣ ಮನೆಗೆ ಬಂದು ಇಬ್ಬರು ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಿಸದೇ ಪ್ರಣೀತ್​ ಸಾವಿಗೀಡಾಗಿದ್ದಾನೆ. ವಿಜಯಾ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.

ಮದುವೆಯಾದಗಿನಿಂದ ಅಮ್ಮ ನಮಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ನಾನೆಂದು ಅಮ್ಮನನ್ನು ಕ್ಷಮಿಸಲಾರೆ. ಅವಳಿಂದಾಗಿಯೇ ನಾನು ವಿಷ ಸೇವಿಸುತ್ತಿದ್ದೇನೆ ಎಂದು ವಿಜಯಾ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೆ, ಅತ್ತೆ ಮನೆಯಲ್ಲೂ ಬೆದರಿಕೆ ಇತ್ತೆಂದು ಆರೋಪಿಸಿದ್ದಾಳೆ. ಪ್ರಣೀತ್​ ಸಹ ಇನ್ನೊಂದು ಜನ್ಮ ಇದ್ದರೆ, ನೀವು ನಿಮ್ಮ ಮಗಳಾಗಿ ಜನಿಸಬೇಕೆಂದು ದೇವರು ಬಯಸುತ್ತಾನೆಂದು ಸಾವಿತ್ರಿ ವಿರುದ್ಧ ಬರೆದಿದ್ದಾನೆಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)