ನ್ಯೂಸ್

Game Changer ಚಿತ್ರತಂಡಕ್ಕೆ ಬಿಗ್​ ಶಾಕ್​; ಟಿಕೆಟ್ ದರ ಏರಿಕೆ ಆದೇಶ ಹಿಂಪಡೆದ ತೆಲಂಗಾಣ ಸರ್ಕಾರ

ಹೈದರಾಬಾದ್​: ಮೆಗಾ ಪವರ್​ಸ್ಟಾರ್​ ರಾಮ್​ಚರಣ್​ ತೇಜ ನಟನೆಯ , ಶಂಕರ್​ ನಿರ್ದೇಶನದ ಗೇಮ್ ಚೇಂಜರ್​ (Game Changer) ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಾಕ್ಸ್​​ಆಫೀಸ್​ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಇನ್ನೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವ ನಡುವೆಯೇ ತೆಲಂಗಾಣ ಸರ್ಕಾರವು ಚಿತ್ರತಂಡಕ್ಕೆ ಶಾಕ್​ ನೀಡಿದೆ.

ಗೇಮ್​ ಚೇಂಜರ್​​ (Game Changer) ಸಿನಿಮಾ ಟಿಕೆಟ್​ ದರ ಏರಿಕೆ ಆದೇಶವನ್ನು ಹಿಂಪಡೆಯುವ ಮೂಲಕ ತೆಲಂಗಾಣ ಸರ್ಕಾರವು ಚಿತ್ರತಂಡಕ್ಕೆ ಶಾಕ್​ ನೀಡಿದ್ದು, ಈ ಮೂಲಕ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ.

ಹೈಕೋರ್ಟ್‌ ನಿರ್ದೇಶನದಂತೆ ಆದೇಶವನ್ನು ಹಿಂಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿ, ಆರೋಗ್ಯ ಮತ್ತು ಭದ್ರತೆ ಕಾರಣಗಳಿಲ್ಲದಿದ್ದರೆ, ಮುಂಜಾನೆ ಪ್ರದರ್ಶನಕ್ಕೆ ಅವಕಾಶವನ್ನೂ ನಿರಾಕರಿಸಲಾಗಿದೆ. ಟಿಕೆಟ್‌ ದರ ಏರಿಕೆ ಹಿಂಪಡೆದ ಕ್ರಮವು ಜನವರಿ 16ರಿಂದ ಜಾರಿಯಾಗಲಿದೆ ಎಂದು ಸರ್ಕಾರ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಜನವರಿ 10ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಪ್ರದರ್ಶನಗಳಿಗೆ ಅವಕಾಶ ನೀಡುವಂತೆ ಹಾಗೂ ಟಿಕೆಟ್‌ಗಳಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ₹ 150 ಹಾಗೂ ಏಕ ಪರದೆಯ ಚಿತ್ರ ಮಂದಿರಗಳಲ್ಲಿ ₹ 100 ಹೆಚ್ಚುವರಿ ದರ ನಿಗದಿ ಮಾಡಲು ಅನುಮತಿ ನೀಡುವಂತೆ ಗೇಮ್‌ ಚೇಂಜರ್‌ (Game Changer) ಸಿನಿಮಾ ತಂಡ ಮನವಿ ಮಾಡಿತ್ತು. ಅದರಂತೆ, ರಾಜ್ಯ ಸರ್ಕಾರವು ಜನವರಿ 03ರಂದು ಅನುಮತಿ ನೀಡಿ ಆದೇಶ ಹೊರಡಿಸಿತ್ತು.

ಜನವರಿ 11ರಿಂದ 19ರ ವರೆಗೆ (9 ದಿನ) ಮಲ್ಟಿಪ್ಲೆಕ್ಸ್‌ಗಳಲ್ಲಿ ₹ 150 ಹಾಗೂ ಏಕ ಪರದೆಯ ಚಿತ್ರ ಮಂದಿರಗಳಲ್ಲಿ ₹ 100 ಹೆಚ್ಚುವರಿ ದರದೊಂದಿಗೆ ಐದು ಪ್ರದರ್ಶನಕ್ಕೂ ಅನುಮತಿ ನೀಡಿತ್ತು. ಇದೇ ವೇಳೆ, ಮಾದಕವಸ್ತು ಹಾಗೂ ಸೈಬರ್‌ ಅಪರಾಧಗಳ ನಕಾರಾತ್ಮಕ ಪರಿಣಾಮಗಳ ಕುರಿತು ಜಾಹೀರಾತು ಪ್ರದರ್ಶಿಸುವಂತೆ ಸೂಚಿಸಿತ್ತು. ಇದೀಗ ಟಿಕೆಟ್​ ದರ ಏರಿಕೆ ಆದೇಶವನ್ನು ಹಿಂಪಡೆಯುವ ಮೂಲಕ ತೆಲಂಗಾಣ ಸರ್ಕಾರವು ಚಿತ್ರತಂಡಕ್ಕೆ (Game Changer) ಶಾಕ್​ ನೀಡಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

https://www.vijayavani.net/playing-for-country-is-motivation-mohammed-shami-opens-up-about-his-possible-return-for-champions-trophy

https://www.vijayavani.net/8-year-old-girl-dies-of-heart-attack-in-school-heart-attack-in-children