ನ್ಯೂಸ್

ತಮಿಳುನಾಡಿನ ಈ ಹಳ್ಳಿಯಲ್ಲಿ ಪ್ರತಿದಿನವೂ 'ಧ್ವಜಾರೋಹಣ' ಕಡ್ಡಾಯ

ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ತಮಿಳುನಾಡಿನ ಒಂದು ಹಳ್ಳಿಯಲ್ಲಿ ಪ್ರತಿದಿನವೂ ತಪ್ಪದೆ ಧ್ವಜಾರೋಹಣ ನೆರವೇರುತ್ತದೆ.

ಚೆಂಗಾಲ್ಪಟ್ಟು ಜಿಲ್ಲೆಯ ಸಿರುದಮೂರ್​ ಗ್ರಾಮದಲ್ಲಿ 2018ರ ಆಗಸ್ಟ್​ 15ರಿಂದ ಒಂದು ದಿನವೂ ತಪ್ಪದೆ ಮುಂಜಾನೆ 8.45ಕ್ಕೆ ತ್ರಿವರ್ಣಧ್ವಜ ಹಾರಿಸಲಾಗುತ್ತದೆ. ಪ್ರತಿದಿನ ಓರ್ವ ವ್ಯಕ್ತಿ ಬಂದು ಬೆಳಗ್ಗೆ ಧ್ವಜಾರೋಹಣ ಮಾಡುತ್ತಾನೆ. ನಂತರ ಸಂಜೆ 4ಗಂಟೆಗೆ ರಾಷ್ಟ್ರಗೀತೆ ಹಾಡಿ, ಅದನ್ನು ಧ್ವಜ ಇಳಿಸಿ ಹೋಗುತ್ತಾನೆ. ಮತ್ತೆ ಮರುದಿನ ಧ್ವಜಾರೋಹಣ...ಹೀಗೆ ಸತತ ಎರಡು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ಸಣ್ಣ ಹಣಕಾಸು ಸಂಸ್ಥೆಯೊಂದರ ಉಪಾಧ್ಯಕ್ಷ ವಿಜಯಕೃಷ್ಣನ್​ ಎಂಬುವರು ಇದನ್ನು ಮೊದಲು ಪ್ರಾರಂಭಿಸಿದ್ದಾರೆ. ಈ ಗ್ರಾಮದಲ್ಲಿ ಸುಮಾರು 400 ಮನೆಗಳು ಇವೆ. ಪ್ರತಿದಿನವೂ ಒಬ್ಬನೇ ವ್ಯಕ್ತಿ ಧ್ವಜಾರೋಹಣ ಮಾಡಿ, ಸಂಜೆ ಅದನ್ನು ಅವರೋಹಣ ಮಾಡುತ್ತಾನೆ. ಒಂದೊಮ್ಮೆ ಆತನಿಗೆ ಆಗಿಲ್ಲ ಎಂದರೆ ಬೇರೊಬ್ಬರು ಮಾಡುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಯುವಕರು, ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎಂದೂ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಖಾನೆಯಲ್ಲಿ ಉತ್ಪಾದನೆಯಾಯ್ತು ರಷ್ಯಾದ ಕೋವಿಡ್​ ಲಸಿಕೆ ಸ್ಪುಟ್ನಿಕ್​-ವಿ; ವೈದ್ಯರು, ಶಿಕ್ಷಕರಿಗೆ ಮೊದಲ ಚುಚ್ಚುಮದ್ದು..!

ಧ್ವಜಾರೋಹಣ ಆದಾಗ, ಸಂಜೆ ಅದನ್ನು ಇಳಿಸುವಾಗ ಲೌಡ್​ ಸ್ಪೀಕರ್​ನಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತದೆ. ಇದು ಸ್ಥಳೀಯ ಮಟ್ಟದಲ್ಲಿ ಉತ್ತಮ ಪರಿಣಾಮ ಕೊಡುತ್ತಿದೆ ಎಂದು ತಿಳಿಸಿದ್ದಾರೆ.

ಹೀಗೆ ಪ್ರತಿದಿನ ರಾಷ್ಟ್ರಧ್ವಜ ಹಾರಿಸಲಾಗುತ್ತದೆ. ಪ್ರತಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದಂದು ಹೊಸ ಧ್ವಜ ಹಾರಿಸಲಾಗುತ್ತದೆ ಎಂದು ಅಲ್ಲಿನವರು ಹೇಳಿದ್ದಾರೆ. (ಏಜೆನ್ಸೀಸ್​)