More

    ಕಾರ್ಖಾನೆಯಲ್ಲಿ ಉತ್ಪಾದನೆಯಾಯ್ತು ರಷ್ಯಾದ ಕೋವಿಡ್​ ಲಸಿಕೆ ಸ್ಪುಟ್ನಿಕ್​-ವಿ; ವೈದ್ಯರು, ಶಿಕ್ಷಕರಿಗೆ ಮೊದಲ ಚುಚ್ಚುಮದ್ದು..!

    ಮಾಸ್ಕೋ: ಸಂಶೋಧನಾ ಕೇಂದ್ರದ ಅಂಗಳದಿಂದ ಹೊರಬಿದ್ದ ರಷ್ಯಾದ ಕರೊನಾ ನಿಗ್ರಹ ಲಸಿಕೆ ಸ್ಪುಟ್ನಿಕ್​-ವಿ ಈಗ ಔಷಧ ತಯಾರಿಕಾ ಘಟಕದಲ್ಲೂ ಸಜ್ಜಾಗಿ ಕುಳಿತಿದೆ.

    ಲಸಿಕೆಯ ಮೊದಲ ಬ್ಯಾಚ್​ ಉತ್ಪಾದನೆಯಾಗಿದೆ ಎಂದು ರಷ್ಯಾದ ಇಂಟರ್​ಫ್ಯಾಕ್ಸ್​ ಸುದ್ದಿಸಂಸ್ಥೆ ವರದಿ ಮಾಡಿದೆ. ವ್ಯಾಕ್ಸಿನ್​ ಉತ್ಪಾದನೆ ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ ಕೆಲವೇ ತಾಸಿನ ಬಳಿಕ ಮೊದಲ ಬ್ಯಾಚ್​​ ಸಿದ್ಧವಾಗಿದೆ ಎಂಬ ಸುದ್ದಿಯೂ ಹೊರಬಿದ್ದಿದೆ.

    ಇದನ್ನೂ ಓದಿ; ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ? 

    ಸ್ಥಳೀಯ ಸಿಸ್ಟೆಮಾ ಕಂಪನಿ ಇದನ್ನು ಉತ್ಪಾದಿಸುತ್ತಿದ್ದು, ಮುಂದಿನ ಜನವರಿವರೆಗೆ ಪ್ರತಿ ತಿಂಗಳು 50 ಲಕ್ಷ ಡೋಸ್​ ಉತ್ಪಾದಿಸುವ ಗುರಿ ಹೊಂದಲಾಗಿದೆ.
    ಲಸಿಕೆ ಉತ್ಪಾದನೆಯಲ್ಲಿ ಇಷ್ಟೊಂದು ತರಾತುರಿ ತೋರುತ್ತಿರುವ ರಷ್ಯಾದ ಕ್ರಮ ಭಾರಿ ಟೀಕೆಗೂ ಗುರಿಯಾಗಿದೆ. ಸುರಕ್ಷತೆಗಿಂತಲೂ ದೇಶದ ಪ್ರತಿಷ್ಠೆಯನ್ನೇ ರಷ್ಯಾ ಮುಖ್ಯವಾಗಿಸಿಕೊಂಡಿದೆ ಎಂದು ತಜ್ಞರು ಟೀಕಿಸಿದ್ದಾರೆ.

    ಜಗತ್ತಿನ ಮೊಟ್ಟ ಮೊದಲ ಕರೊನಾ ಲಸಿಕೆ ಉತ್ಪಾದನೆ ಮಾಡಿರುವುದಾಗಿ ಘೋಷಿಸಿರುವ ರಷ್ಯಾ ಅದಕ್ಕೆ ತಾನೇ ತಯಾರಿಸಿದ ಜಗತ್ತಿನ ಮೊತ್ತಮೊದಲ ಉಪಗ್ರಹ ಸ್ಪುಟ್ನಿಕ್​ನ ನೆನಪಿನಲ್ಲಿ ಸ್ಪುಟ್ನಿಕ್​-ವಿ ಎಂದು ಹೆಸರಿಟ್ಟಿದೆ.

    ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…! 

    ಲಸಿಕೆಯನ್ನು ಮೊದಲಿಗೆ ವೈದ್ಯರು, ಆರೋಗ್ಯ ಕ್ಷೇತ್ರದ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷ ಪುಟಿನ್​ ಈಗಾಗಲೇ ತಿಳಿಸಿದ್ದಾರೆ. ಸೆಪ್ಟಂಬರ್​ನಲ್ಲಿ ಲಸಿಕೆಯನ್ನು ಬೃಹತ್​ ಪ್ರಮಾನದಲ್ಲಿ ಉತ್ಪಾದನೆ ಮಾಡಲಾಗುವುದು. ಅಕ್ಟೋಬರ್​ನಲ್ಲಿ ಸಾರ್ವಜನಿಕ ಅಭಿಯಾನದ ಮೂಲಕ ಎಲ್ಲರಿಗೂ ಲಸಿಕೆ ನೀಡುವ ಯೊಜನೆಯನ್ನು ರಷ್ಯಾ ರೂಪಿಸಿದೆ.

    ಇದಲ್ಲದೇ. 20ಕ್ಕೂ ಅಧಿಕ ದೇಶಗಳಿಂದ ರಷ್ಯಾದ ಲಸಿಕೆಗೆ ಬೇಡಿಕೆ ಬಂದಿದೆ. 100 ಕೋಟಿ ಡೋಸ್​ ಪೂರೈಸುವಂತೆ ವಿವಿಧ ದೇಶಗಳು ಮನವಿ ಂಆಡಿವೆ ಎಂದು ರಷ್ಯಾ ಹೇಳಿದೆ.

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts