ನ್ಯೂಸ್

VIDEO| ಒಂಟಿ ಸಲಗದ ಮುಂದೆ ಹುಚ್ಚಾಟ; ಕಿಡಿಕಾರಿದ ನೆಟ್ಟಿಗರು

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಬೇಕೆಂಬ ಹಂಬಲದಲ್ಲಿ ತಮ್ಮನ್ನು ತಾವು ರೀಲ್ಸ್​ ಹಾಗೂ ಫೋಟೋಗಳಿಗೆ ಫೋಸ್​ ನೀಡುವುದನ್ನು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.

ಇದೀಗ ತಮಿಳುನಾಡಿನಲ್ಲಿ ವ್ಯಕ್ತಿ ಓರ್ವ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಗೀಳಿಗೆ ಬಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಆನೆಯ ಮುಂದೆ ಪೋಸ್​

ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಓರ್ವ ಆನೆಯ ಬಳಿ ಹೋಗಿ ಅದನ್ನು ರೇಗಿಸುತ್ತಿರುವುದು ಕಂಡು ಬಂದಿದೆ ಮತ್ತು ಈ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ.

IFS ಅಧಿಕಾರಿ ಸಾಕೇತ್​ ಬಡೋಲಾ ಈ ವಿಡಿಯೋವನ್ನು ಹಂಚಿಕೊಂಡಿದ್ದು ಘಟನೆಯೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೊಗೇನಕಲ್​ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಿಡಿಕಾರಿದ ನೆಟ್ಟಿಗರು

ವಿಡಿಯೋದಲ್ಲಿ ಕಂಡು ಬರುವ ಹಾಗೆ ಕುಡಿದ ಮತ್ತಿನಲ್ಲಿ ವ್ಯಕ್ತಿ ಓರ್ವ ಆನೆಯ ಬಳಿ ಹೋಗಿ ಅದನ್ನು ಕಿಚಾಯಿಸಲು ಪ್ರಯತ್ನಿಸುತ್ತಾನೆ. ಆನೆ ಹಿಂಬದಿಗೆ ಹೋಗುತ್ತದೆ ಮತ್ತು ಸೊಂಡಿಲಿನಿಂದ ಮಣ್ಣನ್ನು ಎರಚುತ್ತದೆ.

ಇನ್ನು ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇಂತಹ ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರೋಪಿ ಬಂಧನ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲ್ಲಿಗಟ್ಟಿದ್ದಾರೆ.

ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿ ಹಅಗು ಪೊಲೀಸ್​ ಅಧಿಕಾರಿಗಳಿಗೆ ನೆಟ್ಟಿಗರು ಧನ್ಯವಾದಗಳನ್ನು ತಿಳಿಸಿದ್ಧಾರೆ.