Tamannaah Bhatia: ಪ್ರಿಯಕರ ವಿಜಯ್ ವರ್ಮಾ ಅವರೊಂದಿಗಿನ ಪ್ರೇಮ ಸಂಬಂಧದಿಂದ ತಮನ್ನಾ ದೂರ ಸರಿದಿದ್ದಾರೆ ಎಂಬ ವದಂತಿಗಳು ಸದ್ಯ ಜಾಲತಾಣವನ್ನು ವ್ಯಾಪಕವಾಗಿ ಸುತ್ತುವರೆದಿವೆ. ವಿಜಯ್ ಜತೆಗಿನ ಬ್ರೇಕಪ್ ಸುದ್ದಿಯಿಂದಲೇ ಸಖತ್ ಟ್ರೆಂಡಿಂಗ್‌ನಲ್ಲಿರುವ ಮಿಲ್ಕಿ ಬ್ಯೂಟಿ, ಇದ್ಯಾವುದಕ್ಕೂ ಉತ್ತರಿಸುವ ಅಥವಾ ಪ್ರತಿಕ್ರಿಯೆ ನೀಡುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಆದರೆ, ಕಡೆಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.
ತೆಲುಗು ಚಿತ್ರರಂಗದ ಸುಂದರಿ, 'ಮಿಲ್ಕಿ ಬ್ಯೂಟಿ' ಎಂದೇ ದಕ್ಷಿಣ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ನಟಿ ತಮನ್ನಾ ಭಾಟಿಯಾ ಸದ್ಯ ಟಾಲಿವುಡ್ಗಿಂತಲೂ ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಈ ಮಧ್ಯೆ ತನ್ನನ್ನು ಬೆಂಬಿಡದಂತೆ ಕಾಡುತ್ತಿರುವ ಲವ್ ಬ್ರೇಕಪ್ ಸುದ್ದಿಗಳಿಂದ ಆದಷ್ಟು ದೂರ ಉಳಿದಿರುವ ತಮನ್ನಾ, ರವೀನಾ ಟಂಡನ್ ಅವರು ಇತ್ತೀಚೆಗೆ ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ವಿಜಯ್ ಜತೆಗೆ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಪ್ರತ್ಯೇಕವಾಗಿ ಆಗಮಿಸಿದ್ದರು. ಇದು ವದಂತಿಗಳಿಗೆ ಕಾರಣವಾಯಿತು.
ಸಂದರ್ಶನದಲ್ಲಿ ಸಿನಿಮಾ ಕುರಿತಂತೆ ಹಲವು ವಿಷಯಗಳನ್ನು ಹಂಚಿಕೊಂಡ ತಮನ್ನಾ, ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಕಡೆಗೂ ತುಟಿ ಬಿಚ್ಚಿದರು. "ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೀನಿ. ವೈಯಕ್ತಿಕ ಜೀವನ ಒಂದು ರೀತಿ ರಹಸ್ಯ. ಯಾವ ವಿಷಯವನ್ನು ಹೇಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ನನಗೆ ಅದು ಸರಿ ಅನಿಸಿದರೆ ಮಾತ್ರ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ನನ್ನ ಕಡೆಯಿಂದ ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ದೂರುಗಳಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಉತ್ತಮ ಆರೈಕೆಗಾಗಿ 200 ರೂ.ಗೆ ಮಗು ಮಾರಾಟ ಮಾಡಿದ ವೃದ್ಧೆ!; ತಡವಾಗಿ ಬೆಳಕಿಗೆ ಬಂದ ಹೃದಯವಿದ್ರಾವಕ ಘಟನೆ | Heart Breaking
"ನಾನು ಜನಪರ ವ್ಯಕ್ತಿ. ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುವೆ. ಏರ್ಪೋರ್ಟ್ನಲ್ಲಿ ಫೋಟೋಗ್ರಾಫರ್, ಅಭಿಮಾನಿಗಳನ್ನು ನಗುಮುಖದಿಂದಲೇ ಮಾತನಾಡಿಸುತ್ತೀನಿ. ಫೋಟೋ, ಸೆಲ್ಫಿ ಎಂದು ಕೇಳುವ ಜನರಿಗೆ ನಾನು ಓಕೆ ಅಂತೀನಿ. ಇದನ್ನೆಲ್ಲ ನಾನು ಬಹಳ ಸಂತೋಷದಿಂದ, ಹೃದಯದಿಂದ ಮಾಡುತ್ತಿದ್ದೇನೆ. ಮಾಡಿಕೊಂಡಿರುವ ಆಯ್ಕೆಯಲ್ಲಿ ನಾನು ಖುಷಿಯಾಗಿದ್ದೇನೆ. ಅಪರಿಚಿತರೊಂದಿಗೆ ಮಾತನಾಡುವ ಮೂಲಕ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು" ಎಂದು ತಮನ್ನಾ ಹೇಳಿದ್ದಾರೆ,(ಏಜೆನ್ಸೀಸ್).