ಮುಂಬೈ: ದಕ್ಷಿಣ ಭಾರತದಲ್ಲಿ ಹೆಸರು ಗಳಿಸಿ ಪ್ರಸ್ತುತ ಬಾಲಿವುಡ್ನಲ್ಲಿ ಬಿಸಿಯಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಬಗ್ಗೆ ಪರಿಚಯ ಮಾಡುವ ಅಗತ್ಯ ಇಲ್ಲ. ಭಾರತೀಯ ಸಿನಿಮಾದಲ್ಲಿ ಟಾಪ್ ನಾಯಕಿಯರಲ್ಲಿ ಇವರು ಒಬ್ಬರು. ನಟಿಯ ವೈಯಕ್ತಿಕ ಜೀವನ, ಸಿನಿಮಾ ಹೀಗೆ ಹಲವು ಸುದ್ದಿಯಿಂದಾಗಿ ಆಗಾಗ್ಗೆ ಮುನ್ನೆಲೆಯಲ್ಲಿರುತ್ತಾರೆ.
ಇದನ್ನು ಓದಿ: ಕ್ವೀನ್ ಸಿನಿಮಾಗೆ ಸಿಕ್ತು ಗ್ರೀನ್ಸಿಗ್ನಲ್; ಷರತ್ತುಗಳೊಂದಿಗೆ ‘ಎಮರ್ಜೆನ್ಸಿ’ ರಿಲೀಸ್ಗೆ ಅಸ್ತು ಎಂದ CBFC
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತನ್ನ ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಜೀವನದಲ್ಲಿ ಎರಡು ಬ್ರೇಕಪ್ ಆಗಿದ್ದು, ಅವರಿಂದ ಸಾಕಷ್ಟು ಪಾಠ ಕಲಿತಿರುವುದಾಗಿ ತಿಳಿಸಿದ್ದಾರೆ. ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಹಿಂದಿನ ಎರಡು ಸಂಬಂಧ ಮುರಿದು ಬಿದ್ದಿದ್ದು ಏಕೆ ಎಂಬುದನ್ನು ತಿಳಿಸಿದರು.
ಮೊದಲನೆಯದು ನಾನು ತುಂಬಾ ಚಿಕ್ಕವಳಿದ್ದೆ. ಜೀವನದಲ್ಲಿ ಸಾಧಿಸಲು ಮತ್ತು ನೋಡಲು ಸಾಕಷ್ಟಿದೆ ಎನ್ನಿಸಿತ್ತು. ಆ ವ್ಯಕ್ತಿಗಾಗಿ ನಾನು ನನ್ನ ಎಲ್ಲಾ ಅಗತ್ಯತೆ ಮತ್ತು ಆಸೆಗಳನ್ನು ತ್ಯಜಿಸುತ್ತೇನೆ ಎಂಬ ಅನಿಸಿಕೆ ನನಗೆ ಬರಲಿಲ್ಲ ಎಂದು ಮೊದಲ ಬ್ರೇಕಪ್ ಬಗ್ಗೆ ಹೇಳಿದರು. ಇನ್ನೂ ಎರಡನೇ ವಿಷಯದಲ್ಲಿ ಆತ ನನಗೆ ಸೂಕ್ತನಲ್ಲ ಎಂದು ಎನ್ನಿಸಿತ್ತು. ದೀರ್ಘಾಕಾಲದ ಬಾಳಸಂಗಾತಿಗೆ ಆತ ಸೂಕ್ತನಲ್ಲ ಎಂಬುದು ನನ್ನ ಭಾವನೆ. ನಾನು ಸುಳ್ಳು ಹೇಳುವವರೊಂದಿಗೆ ಇರಲು ಸಾಧ್ಯವಿಲ್ಲ, ವಿಶೇಷವಾಗಿ ಚಿಕ್ಕ ವಿಷಯಕ್ಕೂ ಸುಳ್ಳು ಹೇಳುವವರೊಂದಿಗೆ ಜೀವನ ನಡೆಸುವುದು ಕಷ್ಟವೆನ್ನಿಸಿತು ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಅವರಿಗೆ ಒಂದು ಸಂಬಂಧದಲ್ಲಿ ಪುರುಷರು ಅನುಸರಿಸಬೇಕಾದ ವಿಷಯದ ಬಗ್ಗೆ ಕೇಳಲಾಯಿತು ಅದಕ್ಕೆ ಉತ್ತರಿಸಿದ ತಮನ್ನಾ, ನಿಮ್ಮ ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ. ಅವರು ಯಾವುದೇ ನಿರೀಕ್ಷೆಯೊಂದಿಗೆ ನಿಮ್ಮೊಂದಿಗೆ ಮಾತನಾಡುವುದಿಲ್ಲ. ಅವರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ ಎಂದು ತಿಳಿಸಿದರು.
ಬಿ-ಟೌನ್ ಅಂಗಳದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬು ಮಾತು ಕೇಳಿಬರುತ್ತಿದೆ. ಎಲ್ಲೇ ಹೋದರೂ ಇಬ್ಬರೂ ಒಟ್ಟಿಗೆ ಕಾಣುತ್ತಾರೆ. ಶೀಘ್ರದಲ್ಲೇ ಈ ಜೋಡಿ ವಿವಾಹವಾಗಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಈ ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ಗುಸುಗುಸು ಕೇಳಿಬರುತ್ತಿದೆ. ತಮನ್ನಾ ಭಾಟಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಕೆಲವು ಚಿತ್ರಗಳನ್ನು ಡಿಲೀಟ್ ಮಾಡಿರುವುದೆ ಇಷ್ಟಕ್ಕೆಲ್ಲಾ ಕಾರಣವಾಗಿದೆ. (ಏಜೆನ್ಸೀಸ್)