Tamannaah Bhatia: ತೆಲುಗು ಚಿತ್ರರಂಗದ ಸುಂದರಿ, ಮಿಲ್ಕಿ ಬ್ಯೂಟಿ ಎಂದೇ ದಕ್ಷಿಣ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ನಟಿ ತಮನ್ನಾ ಭಾಟಿಯಾ ಸದ್ಯ ಬ್ರೇಕಪ್ ವದಂತಿಗಳಿಂದ ವ್ಯಾಪಕ ಚರ್ಚೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಅಮೆರಿಕ ಗುಪ್ತಚರ ನಿರ್ದೇಶಕಿ ಭೇಟಿ; ತುಳಸಿ ಗಬ್ಬಾರ್ಡ್ಗೆ ಪವಿತ್ರ ಗಂಗಾಜಲ ನೀಡಿದ ಪ್ರಧಾನಿ ಮೋದಿ | Gangajal
ಪ್ರಿಯಕರ ವಿಜಯ್ ವರ್ಮಾ ಅವರೊಂದಿಗಿನ ಪ್ರೇಮ ಸಂಬಂಧದಿಂದ ತಮನ್ನಾ ದೂರ ಸರಿದಿದ್ದಾರೆ ಎಂಬ ವದಂತಿಗಳು ಜಾಲತಾಣವನ್ನು ಸುತ್ತುವರೆದಿವೆ. ಸದ್ಯ ವಿಜಯ್ ಜತೆಗಿನ ಬ್ರೇಕಪ್ ಸುದ್ದಿಯಿಂದಲೇ ಸಖತ್ ಟ್ರೆಂಡಿಂಗ್‌ನಲ್ಲಿರುವ ಮಿಲ್ಕಿ ಬ್ಯೂಟಿ, ಇದ್ಯಾವುದಕ್ಕೂ ಉತ್ತರಿಸುವ ಅಥವಾ ಪ್ರತಿಕ್ರಿಯೆ ನೀಡುವ ಪ್ರಯತ್ನಕ್ಕೆ ಮುಂದಾಗಿಲ್ಲ. ತಮನ್ನಾರಂತೆಯೇ ವಿಜಯ್ ಕೂಡ ಈ ವಿಷಯದಲ್ಲಿ ಮೌನ ತಾಳಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
'ಲಸ್ಟ್ ಸ್ಟೋರೀಸ್ 2' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ, ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದರು. ಆದರೆ, ಇದೀಗ ಇಬ್ಬರ ನಡುವಿನ ಅಭಿಪ್ರಾಯ, ಅನಿಸಿಕೆಗಳು ಭಿನ್ನವಾಗಿದ್ದು, ಇದು ಸಂಬಂಧವನ್ನು ಮುರಿದುಕೊಳ್ಳುವ ಹಂತವನ್ನು ತಲುಪಿದೆ ಎಂದು ಹೇಳಲಾಗಿದೆ. ಜೋಡಿಯ ಮಧ್ಯೆ ಸಾಕಷ್ಟು ವ್ಯತ್ಯಾಸಗಳು ಉಂಟಾಗಿ ದೂರವಾಗಿದ್ದಾರೆ ಎಂಬ ವರದಿಗಳಿವೆ. ಆದರೆ, ಇದ್ಯಾವುದಕ್ಕೂ ಇಬ್ಬರಿಂದ ಉತ್ತರ ಲಭಿಸಿಲ್ಲ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ತಿಂಗಳಲ್ಲಿ… ಕೋರ್ಟ್ನಲ್ಲಿ ‘ಚಿನ್ನ’ದ ಬೆಡಗಿ ರನ್ಯಾ ಪತಿ ಹೇಳಿದ್ದಿಷ್ಟು | Ranya Rao
ಈ ವರ್ಷ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳ ನಡುವೆ ಇದೀಗ ಸ್ಟಾರ್ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬುದು ಟಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಈ ವದಂತಿಗಳಿಗೆ ಕಿವಿಗೊಡದ ತಮನ್ನಾ ಭಾಟಿಯಾ, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಪವಾಡಗಳಿಗೆ ನಿರೀಕ್ಷಿಸಬೇಡಿ, ಅದಕ್ಕಾಗಿ ಕಾಯಬೇಡಿ. ಅದನ್ನು ನೀವೇ ಸೃಷ್ಟಿಸಿ' ಎಂದು ಬರೆಯಲಾದ ಪೋಸ್ಟ್ವೊಂದನ್ನು ತಮ್ಮ ಸ್ಟೋರಿಸ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ಅನುಯಾಯಿ ಮತ್ತು ಅಭಿಮಾನಿಗಳಲ್ಲಿದ್ದ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್).