ದೆಹಲಿಯಲ್ಲಿ ಅಮೆರಿಕ ಗುಪ್ತಚರ ನಿರ್ದೇಶಕಿ ಭೇಟಿ; ತುಳಸಿ ಗಬ್ಬಾರ್ಡ್​ಗೆ ಪವಿತ್ರ ಗಂಗಾಜಲ ನೀಡಿದ ಪ್ರಧಾನಿ ಮೋದಿ | Gangajal

ವಿಜಯವಾಣಿ (11)
Published on

ನವದೆಹಲಿ: ಇಂದು (ಮಾ.17) ರಾಷ್ಟ್ರ ರಾಜಧಾನಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ (DNI) ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಮುಖಾಮುಖಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅವರಿಗೆ ಮಹಾಕುಂಭ ಮೇಳದ ಪವಿತ್ರ ಗಂಗಾಜಲವನ್ನು (Gangajal ) ಉಡುಗೊರೆಯಾಗಿ ನೀಡಿದರು.

ಪ್ರಧಾನಿಯನ್ನು ಭೇಟಿಯಾಗುವ ಮೊದಲು ಗಬ್ಬಾರ್ಡ್ ಅವರು ರಾಜನಾಥ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು. ಎರಡೂ ದೇಶಗಳ ನಡುವಿನ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸುವ ಬಗ್ಗೆ ಗಮನಹರಿಸಿದರು. ಸಭೆಯ ಸಮಯದಲ್ಲಿ, ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳನ್ನು ಸುದೀರ್ಘವಾಗಿ ಚರ್ಚಿಸಿದರು. ಇದಾದ ಬಳಿಕ ಪ್ರಧಾನಿಯನ್ನು ಭೇಟಿಯಾಗಿ, ಅವರಿಂದ ಗಂಗಾಜಲವನ್ನು ಸ್ವೀಕರಿಸಿದರು.

"ನವದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾದ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ. ಭಾರತ-ಯುಎಸ್ ಪಾಲುದಾರಿಕೆಯನ್ನು ಇನ್ನಷ್ಟು ಗಾಢವಾಗಿಸುವ ಗುರಿಯನ್ನು ಹೊಂದಿರುವ ರಕ್ಷಣೆ ಮತ್ತು ಮಾಹಿತಿ ಹಂಚಿಕೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ" ಎಂದು ಸಭೆ ಮುಕ್ತಾಯಗೊಂಡ ನಂತರ ರಾಜನಾಥ್ ಸಿಂಗ್ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net