ನ್ಯೂಸ್

ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಭೀಕರವಾಗಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ| Murder

Murder: ಆಂಧ್ರ ಪ್ರದೇಶದ ಒಂಗೋಲ್​ ಜಿಲ್ಲೆಯ ಕೊಂಡಪಿ ವಿಭಾಗದ ಮರಿಪುಡಿ ಮಂಡಲಂನ ರೇಗಲಗಡ್ಡ ಗ್ರಾಮದಲ್ಲಿ  ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯನ್ನು ಭೀಕರವಾಗಿ ಕೊಲೆಗೈದು, ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ಭಾನುವಾರ(ಸೆ. 14) ವರದಿಯಾಗಿದೆ.

ದಂಪತಿಗಳು ಮನೆಯಿಂದ ಹೊರಬರದಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ  ಘಟನೆ ಬೆಳಕಿಗೆ ಬಂದಿದೆ. ಮೃತ ಪತ್ನಿ ಜಯಮ್ಮ, ಆರೋಪಿ ಪತಿ ಎಂ.ನರಸಿಂಹ ಅಲಿಯಾಸ್ ನಾರಾಯಣ ಎಂದು ಗುರುತಿಸಲಾಗಿದೆ. ದಂಪತಿಗೆ ಮೂವರು ವಿವಾಹಿತ ಹೆಣ್ಣು ಮಕ್ಕಳಿದ್ದರು.

ನಾರಾಯಣ ಹಲವಾರು ವರ್ಷಗಳಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಪತ್ನಿ ಜಯಮ್ಮ ಮೇಲೆ ಆಗಾಗ ಅನುಮಾನ ಪಟ್ಟು ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಜಯಮ್ಮ ತಲೆಗೆ ಗಂಭೀರ ಗಾಯಗಳಾಗಿ ಮೃತಪಟ್ಟಿರುವುದನ್ನು,  ಮತ್ತು ನಾರಾಯಣ ಗಂಟಲಿನ ಮೇಲೆ ಆಳವಾದ ಗಾಯದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಕೊಂಡಪಿ ಸಿಐ ಸೋಮಶೇಖರ್, ಪ್ರಾಥಮಿಕ ತನಿಖೆಯಲ್ಲಿ ನಾರಾಯಣ ತನ್ನ ಪತ್ನಿಯನ್ನು ಮರದ ರಾಡ್‌ನಿಂದ ಹೊಡೆದು ಕೊಂದಿದ್ದಾಮೆ. ನಂತರ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಜಯಮ್ಮ ಮೃತಪಟ್ಟಿದ್ದರು, ನಾರಾಯಣ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)