ನ್ಯೂಸ್

ಕೇಂದ್ರ ಸರ್ಕಾರ ಓಕೆ ಅಂದ್ರೆ ರಾಜ್ಯದಲ್ಲಿ ಕೂಡಲೇ ಶಾಲೆ ಆರಂಭ; ಸುರೇಶ್​ ಕುಮಾರ್​

ಬೆಂಗಳೂರು: ಕರೊನಾ ಸೋಂಕಿನ ಭೀತಿಯಿಂದಾಗಿ ಈ ಭಾರಿಯ ಶೈಕ್ಷಣಿಕ ವರ್ಷ ಆರಂಭ ತಡವಾಗಿದ್ದು, ಮಕ್ಕಳ ಕಲಿಕೆ ನಿರಂತವಾಗಿರಬೇಕೆಂದು ಸದ್ಯ ಆನ್​ಲೈನ್​ ಪಾಠ ನಡೆಯುತ್ತಿದೆ. ಜತೆಗೆ ಮನೆಮನೆ ಪಾಠವೂ ಜಾರಿಯಲ್ಲಿದೆ. ಆದರೂ ಶಾಲೆ ಆರಂಭ ಯಾವಾಗ ಎಂಬ ಪ್ರಶ್ನೆಯೂ ದಟ್ಟವಾಗಿದೆ.

ಈ ಕುರಿತು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಸುರೇಶ್​ ಕುಮಾರ್, ಕೇಂದ್ರ ಸರ್ಕಾರ ಸೂಚಿಸಿದರೆ ಕೂಡಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿರಿ ತಾಯಿಯನ್ನು ಮನೆಯಿಂದ ಹೊರದಬ್ಬಿದ್ದ ಮಕ್ಕಳಿಗೆ ಉಪವಿಭಾಗಾಧಿಕಾರಿ ಕೊಟ್ರು ಭರ್ಜರಿ ಶಾಕ್​!

ಪ್ರತಿ ಶನಿವಾರ ಸೇರಿ 160 ದಿನಗಳು ಸಿಕ್ಕರೆ ವಿದ್ಯಾರ್ಥಿಗಳಿಗೆ ಪಾಠ ಕಲಿಸಬಹುದು ಎಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ. ಈ ಹಿಂದೆ 220 ದಿನ ತರಗತಿ ನಡೆಸಲಾಗುತ್ತಿತ್ತು. ಮುಂದೆ ಇನ್ನೆಷ್ಟು ದಿನಗಳು ಸಿಗುತ್ತವೆ ಎಂದು ಕಾದು ನೋಡಲಾಗುತ್ತಿದೆ ವಾರದೊಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸುರೇಶ್​ ಕುಮಾರ್​ ವಿವರಿಸಿದ್ದಾರೆ.

ಮಕ್ಕಳಿಗೆ ಕೊಲಂಬಸ್​, ವಾಸ್ಕೋಡಿಗಾಮಾ ಬಗ್ಗೆ ತಿಳಿಸುವ ಮೂಲಕ ಸ್ಥಳೀಯ ಮಹತ್ವಗಳನ್ನು ಮರೆಯುತ್ತಿದ್ದೇವೆ. ಇದರಿಂದ ಹೊರಬರಲು ರಾಜ್ಯ ವ್ಯಾಪ್ತಿಯಲ್ಲಿ ಆಯಾ ತಾಲೂಕಿನ ಮಹಾನ್​ ವ್ಯಕ್ತಿ, ಪ್ರಸಿದ್ಧ ಜಾಗಗಳನ್ನು ಪರಿಚಯಿಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದರು.