More

    ತಾಯಿಯನ್ನು ಮನೆಯಿಂದ ಹೊರದಬ್ಬಿದ್ದ ಮಕ್ಕಳಿಗೆ ಉಪವಿಭಾಗಾಧಿಕಾರಿ ಕೊಟ್ರು ಭರ್ಜರಿ ಶಾಕ್​!

    ಹಾನಗಲ್ಲ: ಹೆತ್ತವರು ದೇವರ ಸಮಾನ ಅಂತಾರೆ. ವೃದ್ಧಾಪ್ಯದಲ್ಲಿ ತಂದೆ-ತಾಯಿಗೆ ಮಕ್ಕಳೇ ಆಸರೆ ಆಗಬೇಕು. ಇದು ಕಾನೂನಿನ ನಿಯಮ ಮಾತ್ರವಲ್ಲ, ಮಾನವೀಯತೆ ಕೂಡ, ಮಕ್ಕಳ ಪ್ರಮುಖ ಜವಾಬ್ದಾರಿಯೂ ಹೌದು. ಆದರಿಲ್ಲಿ ನಾಲ್ವರ ಮಕ್ಕಳ ತಾಯಿ ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಳು. ಆಕೆಯ ಹೆಸರಲ್ಲಿದ್ದ ಬರೋಬ್ಬರಿ ಆರೂವರೆ ಎಕರೆ ಭೂಮಿಯನ್ನೂ ನಯವಾಗಿ ಕಿತ್ತುಕೊಂಡ ಗಂಡು ಮಕ್ಕಳಿಬ್ಬರು ಬಳಿಕ ಹೆತ್ತಮ್ಮನನ್ನೇ ಬೀದಿಗೆ ದಬ್ಬಿದ್ದರು! ಇಂತಹ ಮಕ್ಕಳಿಗೆ ಉಪವಿಭಾಗಾಧಿಕಾರಿ ತಕ್ಕ ಪಾಠ ಕಲಿಸಿದ್ದು, ಹೆತ್ತವರಿಗೆ ಮೋಸ ಮಾಡುವ ಮಕ್ಕಳಲ್ಲಿ ನಡುಕ ಹುಟ್ಟಿಸಿದೆ.

    ಹೌದು, ತಾಯಿ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ಹೆಸರಿಗೆ ವರ್ಗಾಯಿಸಿಕೊಂಡು, ಕೊನೆಗೆ ತಾಯಿಯನ್ನೇ ಮನೆಯಿಂದ ಹೊರಹಾಕಿದ ಪ್ರಕರಣದಲ್ಲಿ ಇಡೀ ಆಸ್ತಿಯನ್ನು ಉಪವಿಭಾಗಾಧಿಕಾರಿ ಮರಳಿ ತಾಯಿಯ ಹೆಸರಿಗೆ ದಾಖಲು ಮಾಡಿದ ಘಟನೆ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿರಿ ಡಿ.ಕೆ.ಶಿವಕುಮಾರ್​ ಮತ್ತೆ ಆಸ್ಪತ್ರೆಗೆ ದಾಖಲು

    ಚಿಕ್ಕಹುಲ್ಲಾಳ ಗ್ರಾಮದ ಯಲ್ಲವ್ವ ಧರ್ಮಗೌಡ ಪಾಟೀಲ ಎಂಬ ವೃದ್ಧೆಗೆ ಪತಿ ಮರಣಾನಂತರ 6.23 ಎಕರೆ ಕೃಷಿ ಜಮೀನು ಬಂದಿತ್ತು. 2011-12ರಲ್ಲಿ ವೃದ್ಧೆ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ವಾರಸುದಾರರಾಗಿ ಪಹಣಿಯಲ್ಲಿ ದಾಖಲಾಗಿದ್ದರು. ನಂತರ ನಾಲ್ವರು ಮಕ್ಕಳು ತಲಾ ಒಂದೊಂದು ಎಕರೆ ಹಂಚಿಕೊಂಡು ತಾಯಿ ಹೆಸರಿಗೆ 2.23 ಎಕರೆ ಜಮೀನು ಇಟ್ಟಿದ್ದರು. 2014-15ರಲ್ಲಿ ಇಬ್ಬರು ಪುತ್ರರು ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ಹಕ್ಕು ಬಿಟ್ಟುಕೊಟ್ಟ ಪತ್ರ ಮಾಡಿಸಿಕೊಂಡಿದ್ದರು. ಅಲ್ಲದೆ, ತಾಯಿಯನ್ನು ಮನೆಯಿಂದ ಹೊರಗಟ್ಟಿದ್ದರು.

    ಯಲ್ಲವ್ವ ತನ್ನ ಪುತ್ರಿಯರ ಸಹಾಯದಿಂದ ಹಾವೇರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸ್ವಾಧಾರ ಕೇಂದ್ರ ಸೇರಿದ್ದಳು. ತನ್ನನ್ನು ಹೊರಗಟ್ಟಿರುವ ಕುರಿತು ಕೇಂದ್ರದ ಅಧ್ಯಕ್ಷೆ ಪರಿಮಳಾ ಜೈನ್​ ಅವರ ಮಾರ್ಗದರ್ಶನದಂತೆ ದೂರು ದಾಖಲಿಸಿದ್ದಳು. ತನಗಾಗಿರುವ ಅನ್ಯಾಯ ಸರಿಪಡಿಸುವಂತೆ ಸವಣೂರು ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದಳು.

    ದೂರು ಪರಿಶೀಲಿಸಿದ ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ, 6.23 ಎಕರೆ ಕೃಷಿ ಭೂಮಿಯನ್ನು ಮತ್ತೆ ಯಲ್ಲವ್ವಳ ಹೆಸರಿಗೆ ದಾಖಲಿಸಿದ್ದಾರೆ.

    ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

    video/ ಅಪಾಯದಲ್ಲಿದ್ದ ನಾಗರಹಾವನ್ನು ಕಾಪಾಡಿತು ಹಂದಿ-ಕಾಗೆಗಳ ಹಿಂಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts