ನವದೆಹಲಿ: ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೇನ್ರ 'ಇ=ಎಂಸಿ2' ಎಂಬ ಸಾಪೇಕ್ಷ ಸಿದ್ಧಾಂತವನ್ನು ಪ್ರಶ್ನಿಸಿ ರಾಜ್ಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಚಾರ್ಲ್ಸ್ ಡಾರ್ವಿನ್ ವಿಕಾಸವಾದ ಸಿದ್ಧಾಂತವನ್ನೂ ಅರ್ಜಿದಾರ ಪ್ರಶ್ನಿಸಿದ್ದರು. ಈ ಸಿದ್ಧಾಂತಗಳು ತಪ್ಪೆಂದು ಅರ್ಜಿದಾರರು ಭಾವಿಸಿದರೆ ಈ ವಿಚಾರದಲ್ಲಿ ತಾನೇನು ಮಾಡಲು ಸಾಧ್ಯ ಎಂದು ಕೋರ್ಟ್ ಪ್ರಶ್ನಿಸಿದೆ. ಈ ಸಿದ್ಧಾಂತಗಳು ತಪ್ಪೆಂದು ತಾನು ಸಾಬೀತು ಪಡಿಸುವುದಾಗಿ ಹೇಳಿದ್ದ ಅರ್ಜಿದಾರ, ಅದಕ್ಕೆ ಒಂದು ವೇದಿಕೆಯ ಅಗತ್ಯವಿದೆ ಎಂದಿದ್ದ.