ನ್ಯೂಸ್

ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ 'ರಜಿನಿಕಾಂತ್'!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ‌

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಚಡ್ಡಿ-ಅಂಗಿ ಧರಿಸಿ ತೀರಾ ಸಾಮಾನ್ಯರಂತೆ ಕಾಣಿಸಿಕೊಂಡ ವಿಡಿಯೋ ವೈರಲ್‌ ಆಗಿತ್ತು. ಸೂಪರ್‌ಸ್ಟಾರ್‌ ಸರಳತೆಯನ್ನು ಹೊಗಳಿ ಬಹಳಷ್ಟು ಜನರು ಆ ವಿಡಿಯೋ ಶೇರ್‌ ಮಾಡಿಕೊಂಡು ಮೆಚ್ಚುಗೆ ಸೂಚಿಸಿದ್ದೂ ನಡೆದಿದೆ.

ಅಷ್ಟಕ್ಕೂ ಅದು ರಜಿನಿಕಾಂತಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅದು ಅವರಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಇನ್ನೊಂದಷ್ಟು ಮಂದಿ ಅವರು ಹಾಗೆ ಕಾಣಿಸಿಕೊಂಡಿದ್ದರೂ ಅಚ್ಚರಿ ಏನಿಲ್ಲ, ಅವರು ಎಷ್ಟೋ ಸಲ ಹೀಗೆ ತುಂಬಾ ಸಿಂಪಲ್‌ ಆಗಿ ಕಾಣಿಸಿಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಇದೀಗ ಆ ವೈರಲ್‌ ವಿಡಿಯೋದ ರಹಸ್ಯ ಬಹಿರಂಗಗೊಂಡಿದೆ. ಅವರು ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅಲ್ಲ. ಥೇಟ್‌ ಅವರನ್ನೇ ಹೋಲುವ ಸುಧಾಕರ್‌ ಪ್ರಭು ಅವರ ವಿಡಿಯೋ. ಕೇರಳದ ಫೋರ್ಟ್‌ ಕೊಚ್ಚಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಅವರು ರಜಿನಿಕಾಂತ್‌ ಅವರನ್ನೇ ಹೋಲುತ್ತಿದ್ದಾರೆ. ಈ ವಿಷಯವನ್ನು ಮಲಯಾಳಂ ಯೂಟ್ಯೂಬರ್‌ ಒಬ್ಬರು ಬಹಿರಂಗಪಡಿಸಿದ್ದಾರೆ.