More

    ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸವಾರರೇ ಗಮನಿಸಿ: ಅಧ್ಯಯನವೊಂದರಿಂದ ಹೊರಬಿದ್ದಿದೆ ಆತಂಕಕಾರಿ ಸಂಗತಿ

    ನವದೆಹಲಿ: ದೇಶದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಭರಾಟೆ ಜೋರಾಗಿದೆ. ದ್ವಿಚಕ್ರ ಮಾತ್ರವಲ್ಲದೆ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಕೂಡ ಬ್ಯಾಟರಿಯಿಂದ ಚಲಿಸುವಂಥವುಗಳನ್ನೇ ಬಳಸುವುದು ಹೆಚ್ಚಾಗಿದೆ. ಈ ನಡುವೆ ಅಧ್ಯಯನವೊಂದರಿಂದ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ.

    ದ್ವಿಚಕ್ರವಾಹನದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದವರ ಪೈಕಿ ಎಲೆಕ್ಟ್ರಿಕ್ ವಾಹನ ಸವಾರರೇ ಹೆಚ್ಚು ಎಂಬ ಅಂಶ ಈ ಅಧ್ಯಯನದಲ್ಲಿ ಕಂಡುಬಂದಿದೆ. ಅಂದಹಾಗೆ ಇಂಥದ್ದೊಂದು ಅಧ್ಯಯನ ವಿದೇಶದಲ್ಲಿ ನಡೆದಿದ್ದು ಎನ್ನುವುದು ಸಮಾಧಾನಕರ ಸಂಗತಿ. ಭಾರತೀಯ ಮೂಲದ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದಾರೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಮಕ್ಕಳು ಹಾಗೂ ಹದಿಹರೆಯದವರು ಗಾಯಾಳುಗಳಾಗುತ್ತಿರುವ ಪ್ರಮಾಣ ಶೇ. 71 ಹೆಚ್ಚಳವಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಅಂಕಿ-ಅಂಶಗಳನ್ನು ಅವಲಂಬಿಸಿ ಈ ಅಧ್ಯಯನ ನಡೆಸಲಾಗಿದೆ. ಯುಎಸ್ ತುರ್ತು ಇಲಾಖೆ ಅಂಕಿ-ಅಂಶದ ಪ್ರಕಾರ ಅಲ್ಲಿನ ದ್ವಿಚಕ್ರವಾಹನಗಳ ಅಪಘಾತದಿಂದ ಗಾಯಾಳುಗಳಾದವರ ಪೈಕಿ ಮಕ್ಕಳೇ 13,557 ಮಂದಿ ಇದ್ದಾರೆ. ಈ ಪ್ರಮಾಣದಲ್ಲಿ ಶೇ. 71 ಏರಿಕೆ ಆಗಿದೆ. 2020ರಲ್ಲಿ ಇದು 5,012 ಇದ್ದಿದ್ದು, 2021ರಲ್ಲಿ 8,545 ಆಗಿತ್ತು.

    ಇದನ್ನೂ ಓದಿ: ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಈ ಗಾಯಾಳುಗಳ ಪೈಕಿ ಅಧ್ಯಯನ ನಡೆಸಿದಾಗ ಶೇ. 32 ಮಂದಿ ಮಾತ್ರ ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರು. ಇನ್ನು ಅಪಘಾತದಲ್ಲಿ ತಲೆಗೆ ಪೆಟ್ಟಾದವರ ಪೈಕಿ ಶೇ. 67 ಮಂದಿ ಹೆಲ್ಮೆಟ್ ಧರಿಸಿಲ್ಲದಿರುವುದು ತಿಳಿದುಬಂದಿದೆ. ಎಲೆಕ್ಟ್ರಿಕ್ ವಾಹನ ಬಳಕೆದಾರರಲ್ಲಿ ಬಹಳಷ್ಟು ಮಂದಿ ಹೆಲ್ಮೆಟ್ ಧರಿಸುತ್ತಿಲ್ಲದಿರುವುದೇ ತಲೆಗೆ ಪೆಟ್ಟುಬಿದ್ದ ಪ್ರಕರಣಗಳು ಈ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣ ಎಂದು ತಿಳಿಸಲಾಗಿದೆ.

    ಫಿಲಡೆಲ್ಫಿಯಾದ ದ ಚಿಲ್ಡ್ರನ್ಸ್​ ಹಾಸ್ಪಿಟಲ್​ನ ಪೀಡಿಯಾಟ್ರಿಕ್ ಆರ್ಥೊಪೆಡಿಕ್ ಸರ್ಜನ್ ಟಾಡ್ ಲಾರೆನ್ಸ್ 2023 ಎಎಪಿ ನ್ಯಾಷನಲ್ ಕಾನ್​ಫೆರೆನ್ಸ್ ಆ್ಯಂಡ್ ಎಕ್ಸ್​ಬಿಷನ್​ನಲ್ಲಿ ಈ ಅಧ್ಯಯನ ವರದಿ ಮಂಡಿಸಿದ್ದಾರೆ.

    ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

    ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts