More

    ವಿರಾಟ್​​ ಕೊಹ್ಲಿ ಎಫೆಕ್ಟ್​! ಅವೇಶ್​ ಖಾನ್​ಗೆ ಹೆಲ್ಮೆಟ್​ ಕೊಡದೆ ಬ್ಯಾಟಿಂಗ್​ಗೆ ಇಳಿಸಿದ ಆರ್​ಆರ್​ ಮ್ಯಾನೇಜ್​ಮೆಂಟ್​

    ನವದೆಹಲಿ: ನಿನ್ನೆ (ಏಪ್ರಿಲ್​ 16) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೂಪರ್ ಗೆಲುವು ಸಾಧಿಸಿದೆ. 224 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ಚೇಸ್​ ಮಾಡಿತು. ಕೆಕೆಆರ್​ ಪರ ಸುನೀಲ್ ನರೇನ್​ ಆರಂಭಿಕರಾಗಿ ಕಣಕ್ಕಿಳಿದು ಶತಕ ಸಿಡಿಸಿದರೆ, ರಾಜಸ್ಥಾನದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಕೂಡ ಶತಕ ಬಾರಿಸಿ ಆರ್‌ಆರ್‌ಗೆ ಅದ್ಭುತ ಜಯ ತಂದುಕೊಟ್ಟರು. ಈ ಪಂದ್ಯದ ಗೆಲುವಿನ ಬಳಿಕ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ಸಂಭ್ರಮದ ಬಗ್ಗೆ ಹಾಸ್ಯ ಚಟಾಕಿಯನ್ನು ಹಾರಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ, ತಂಡದ ಸ್ಟಾರ್ ವೇಗಿ ಅವೇಶ್ ಖಾನ್ ಸಂಭ್ರಮಾಚರಣೆಗೆ ಬಗ್ಗೆ ಕ್ರಿಕೆಟ್ ಪರಿಣತರು ಕೂಡ ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ನಿನ್ನೆಯ ಪಂದ್ಯದಲ್ಲಿ ಅವೇಶ್ ಖಾನ್ ಹೆಲ್ಮೆಟ್ ಧರಿಸಿ ಬಂದಿರಲಿಲ್ಲ. ಹೆಲ್ಮೆಟ್ ಇಲ್ಲದೆಯೇ ಜೋಸ್ ಬಟ್ಲರ್ ಅವರೊಂದಿಗೆ ಗೆಲುವನ್ನು ಆಚರಿಸಿದರು.

    ಬ್ಯಾಟಿಂಗ್​ಗೆ ಬರುವ ಕ್ರಿಕೆಟಿಗನಿಗೆ ಹೆಲ್ಮೆಟ್ ತುಂಬಾ ಮುಖ್ಯ. ಆದರೆ, ಆರ್​ಆರ್ ಮ್ಯಾನೇಜ್​ಮೆಂಟ್ ಏಕೆ ಅವೇಶ್ ಖಾನ್​ಗೆ ಹೆಲ್ಮೆಟ್ ನೀಡಲಿಲ್ಲ ಎಂಬ ಪ್ರಶ್ನೆ ಅನೇಕರಲ್ಲಿದೆ. ಆದರೆ, ತಂಡದ ಮ್ಯಾನೇಜ್​ಮೆಂಟ್ ಬೇಕಂತಲೇ ಅವೇಶ್ ಖಾನ್​ಗೆ ಹೆಲ್ಮೆಟ್ ನೀಡಲಿಲ್ಲ ಎಂಬ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಐಪಿಎಲ್ 2023ರ ಸಂದರ್ಭದಲ್ಲಿ ಲಖನೌ ಸೂಪರ್‌ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ಲಖನೌ ರೋಚಕ ಗೆಲುವು ಸಾಧಿಸಿತ್ತು. ಈ ವೇಳೆ ಅವೇಶ್​ ಖಾನ್​ ಲಖನೌ ಪರ ಆಡುತ್ತಿದ್ದ. ಪಂದ್ಯ ಗೆದ್ದಾಗ ಅವೇಶ್​ ಖಾನ್​ ಕ್ರೀಸ್‌ನಲ್ಲಿದ್ದರು. ಗೆಲುವಿನಲ್ಲಿ ಅವರ ಪಾತ್ರ ಹೆಚ್ಚೇನು ಇಲ್ಲದಿದ್ದರೂ ತುಂಬಾ ಕೋಪದಿಂದ ಹೆಲ್ಮೆಟ್ ಕಳಚಿ ಕ್ರೀಡಾಂಗಣದಲ್ಲೇ ನೆಲಕ್ಕೆ ಬಡಿದಿದ್ದರು. ಆ ಸಮಯದಲ್ಲಿ ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು.

    Avesh Khan 2

    ಅದೂ ಕೂಡ ವಿರಾಟ್ ಕೊಹ್ಲಿ ತಂಡದ ವಿರುದ್ಧ ಅವೇಶ್ ಖಾನ್ ಆ ರೀತಿ ಮಾಡಿದಾಗ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್​ನಲ್ಲಿ ಸೇಡು ತೀರಿಸಿಕೊಂಡರು. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅವೇಶ್ ಖಾನ್ ಅವರ ಬೌಲಿಂಗ್​ಗೆ ಹಿಗ್ಗಾಮುಗ್ಗಾ ಬಾರಿಸಿದ ಕೊಹ್ಲಿ, ಹೆಲ್ಮೆಟ್​ ಅನ್ನು ನೆಲಕ್ಕೆ ಬಡಿಯುತ್ತಿರುವಂತೆ ನಟಿಸಿ, ಸೇಡು ತೀರಿಸಿಕೊಂಡರು. ಈ ವೇಳೆ ಅವೇಶ್​ಗೆ ಮುಖಭಂಗ ಸಹ ಆಯಿತು.

    Avesh Khan 3

    ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಗೆಲುವಿನ ಕೊನೆಯಲ್ಲಿ ಅವೇಶ್​ ಖಾನ್​ ಕ್ರೀಸ್​ಗೆ ಇಳಿದರು. ಆದರೆ, ಹೆಲ್ಮೆಟ್ ಧರಿಸಿ ಬಂದಿರಲಿಲ್ಲ. ಪಂದ್ಯ ಗೆದ್ದಾಗ ಮತ್ತೆ ಹೆಲ್ಮೆಟ್​ ಎಸೆದು ಅವಾಂತರ ಸೃಷ್ಟಿಸಬಹುದು ಎಂದು ಅರಿತ ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜ್​ಮೆಂಟ್ ಬೇಕಂತಲೇ ಹೆಲ್ಮೆಟ್ ನೀಡದೆ ಕಳುಹಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೇಲಾಗಿ, ಅವೇಶ್​ ಖಾನ್ ಒಂದು ಚೆಂಡು ಬಾಕಿ ಇರುವಾಗ ನಾನ್ ಸ್ಟ್ರೈಕರ್‌ನ ತುದಿಗೆ ಬ್ಯಾಟ್ ಹಿಡಿದು ಬಂದಿದ್ದರಿಂದ ಅವರಿಗೆ ಹೆಲ್ಮೆಟ್ ಬೇಕಾಗಿರಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆದರೂ ಇದು ಕೊಹ್ಲಿ ಎಫೆಕ್ಟ್​ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವೇಶ್ ಖಾನ್ ಮೇಲೆ ಜೋಕ್ಸ್​ ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್​)

    ನನ್ನ ಮುಂದಿನ ಟಾರ್ಗೆಟ್​… ಎದುರಾಳಿ ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಟ್ರಾವಿಸ್​ ಹೆಡ್!​

    ನೀವು ಈ ರೀತಿ ವಿಡಿಯೋ ನೋಡ್ತಿದ್ದೀರಾ? ಯೂಟ್ಯೂಬ್​ನಿಂದ ಬಂತು ಎಚ್ಚರಿಕೆ ಸಂದೇಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts