More

    ನೀವು ಈ ರೀತಿ ವಿಡಿಯೋ ನೋಡ್ತಿದ್ದೀರಾ? ಯೂಟ್ಯೂಬ್​ನಿಂದ ಬಂತು ಎಚ್ಚರಿಕೆ ಸಂದೇಶ!

    ನವದೆಹಲಿ: ಜಾಹೀರಾತಗಳನ್ನು ಬ್ಲಾಕ್​ ಮಾಡುವಂತಹ ಥರ್ಡ್​ ಪಾರ್ಟಿ ಮೊಬೈಲ್​ ಆ್ಯಪ್​ಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಯೂಟ್ಯೂಬ್​ ಕಂಪನಿ ತಿಳಿಸಿದೆ. ಈ ಆ್ಯಪ್​ಗಳು ಜಾಹೀರಾತುಗಳಿಲ್ಲದೆ ಯೂಟ್ಯೂಬ್​ ವಿಡಿಯೋ ವೀಕ್ಷಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಆದರೆ, ಕಂಟೆಂಟ್​ ಕ್ರಿಯೆಟ್​ ಮಾಡುವವರಿಗೆ ತಮ್ಮ ಕೆಲಸಕ್ಕೆ ತಕ್ಕ ಫಲ ಸಿಗಲಿ ಎಂಬುದು ಯೂಟ್ಯೂಬ್ ಬಯಕೆಯಾಗಿದೆ.

    ವಿಡಿಯೋವನ್ನು ವೀಕ್ಷಿಸುತ್ತಿರುವಾಗ ಜಾಹೀರಾತನ್ನು ನಿರ್ಬಂಧಿಸುವ ಥರ್ಡ್​ ಪಾರ್ಟಿ ಆ್ಯಪ್ ಅನ್ನು ನೀವು​ ಬಳಸುತ್ತಿದ್ದರೆ, ಆರಂಭದಲ್ಲಿ ಬಫರಿಂಗ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದಾದ ಸ್ವಲ್ಪ ಸಮಯದ ಬಳಿಕ ನೀವು ಆ ಆ್ಯಪ್​ನಲ್ಲಿ ವಿಡಿಯೋವನ್ನು ಪ್ಲೇ ಮಾಡಲಾಗುವುದಿಲ್ಲ ಎಂಬ ಪಾಪ್ ಅಪ್ ಸಂದೇಶವನ್ನು ನೋಡುತ್ತೀರಿ ಎಂದು ಯೂಟ್ಯೂಬ್​ ಕಂಪನಿ ಹೇಳಿದೆ.

    ಏಕೆಂದರೆ, ಕಂಟೆಂಟ್​ ಕ್ರಿಯೆಟರ್ಸ್​ಗೆ ಅವರ ಶ್ರಮಕ್ಕೆ ಫಲ ನೀಡುವುದನ್ನು ಈ ಆ್ಯಪ್​ಗಳು ತಡೆಯುತ್ತವೆ. ಆದರೆ, ಯೂಟ್ಯೂಬ್​ ಕ್ರಿಯೆಟರ್​ಗಳನ್ನು ಬೆಂಬಲಿಸುತ್ತದೆ. ಪ್ರಪಂಚದಾದ್ಯಂತ ಶತಕೋಟಿ ಜನರು ಸ್ಟ್ರೀಮಿಂಗ್ ಸೇವೆಯನ್ನು ಬಳಸಲು ಅವಕಾಶ ಮಾಡಿಕೊಡುತ್ತವೆ. ಕೆಲವು ಜನರು ಸಂಪೂರ್ಣವಾಗಿ ಜಾಹೀರಾತು-ಮುಕ್ತ ಅನುಭವವನ್ನು ಬಯಸುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಯೂಟ್ಯೂಬ್​ ಪ್ರೀಮಿಯಂ ಸಹ ನೀಡುತ್ತೇವೆ ಎಂದು ಯೂಟ್ಯೂಬ್​ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

    ಹೆಚ್ಚಿನ ಜನರು ಜಾಹೀರಾತು ಬ್ಲಾಕರ್‌ ಆ್ಯಪ್​ಗಳನ್ನು ಬಳಸುತ್ತಾರೆ. ಏಕೆಂದರೆ ಯೂಟ್ಯೂಬ್‌ನಲ್ಲಿನ ಜಾಹೀರಾತುಗಳು ಕಿರಿಕಿರಿ ಉಂಟುಮಾಡುತ್ತವೆ ಮತ್ತು ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತವೆ ಎಂಬುದು ಕೆಲವರ ಅಭಿಪ್ರಾಯ. ಆದಾಗ್ಯೂ, ಜಾಹೀರಾತುಗಳ ಕಿರಿಕಿರಿಯನ್ನು ತಪ್ಪಿಸಲು ಯೂಟ್ಯೂಬ್​ ಪ್ರೀಮಿಯಂ ಸೇವೆ ನೀಡುತ್ತಿದೆ. ಆದರೆ, ಈ ಸೇವೆ ಪಡೆಯಲು ಹಣ ಪಾವತಿಸಬೇಕಾಗಿದೆ. ಹೀಗಾಗಿ ತಮ್ಮ ಆದಾಯದ ಮೇಲೆ ಪರಿಣಾಮ ಬೀರಬಾರದು ಅಂತಾ ಜಾಹೀರಾತು ನಿರ್ಬಂಧಿಸುವ ಅಪ್ಲಿಕೇಶನ್‌ಗಳ ವಿರುದ್ಧ ಯೂಟ್ಯೂಬ್​ ಕ್ರಮ ತೆಗೆದುಕೊಳ್ಳುತ್ತಿದೆ. ನಿರ್ಬಂಧಿಸುವ ಮೂಲಕ ಪ್ರೀಮಿಯಂ ಚಂದಾದಾರಿಕೆಯನ್ನು ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಲು ಯೂಟ್ಯೂಬ್​ ಬಯಸುತ್ತದೆ. (ಏಜೆನ್ಸೀಸ್​)

    ಎರಡನೇ ಮದ್ವೆ ಆಗಬಾರದಿತ್ತು! ಪಶ್ಚಾತಾಪದ ಮಾತುಗಳನ್ನಾಡಿ ಕಣ್ಣೀರಿಟ್ಟಿದ್ದರು ದ್ವಾರಕೀಶ್​

    ನನ್ನ ಮುಂದಿನ ಟಾರ್ಗೆಟ್​… ಎದುರಾಳಿ ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಟ್ರಾವಿಸ್​ ಹೆಡ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts