More

    ಅಕ್ರಮ ಸಾಲ, ಬೆಟ್ಟಿಂಗ್ ಆ್ಯಪ್‌ ಜಾಹೀರಾತು: ಸೋಷಿಯಲ್​ ಮೀಡಿಯಾಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಸೂಚನೆ

    ನವದೆಹಲಿ: ಅಕ್ರಮ ಸಾಲ ಮತ್ತು ಬೆಟ್ಟಿಂಗ್ ಆ್ಯಪ್‌ಗಳ ಜಾಹೀರಾತುಗಳು ಪ್ರದರ್ಶಿತವಾಗದಂತೆ ನೋಡಿಕೊಳ್ಳಬೇಕೆಂದು ಸಾಮಾಜಿಕ ಮಾಧ್ಯಮ (ಸೋಷಿಯಲ್​ ಮೀಡಿಯಾ) ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು, “ನಾವು ಈಗ ಅನೇಕ ಪ್ಲಾಟ್‌ಫಾರ್ಮ್‌ಗಳು ತೋರಿಸುವ ವಂಚನೆಯ ಸಾಲದ ಅಪ್ಲಿಕೇಶನ್‌ಗಳ ಜಾಹೀರಾತಿಗೆ ಕಡಿವಾಣ ಹಾಕುತ್ತಿದ್ದೇವೆ” ಎಂದು ಹೇಳಿದರು.

    ಜನರನ್ನು ದಾರಿತಪ್ಪಿಸುವ ಮತ್ತು ದುರ್ಬಳಕೆ ಮಾಡುವ ಮೋಸದ ಸಾಲದ ಅಪ್ಲಿಕೇಶನ್‌ಗಳ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆನ್‌ಲೈನ್ ಪೋರ್ಟಲ್‌ಗಳಿಗೆ ಸ್ಪಷ್ಟಪಡಿಸಿದೆ ಎಂದು ಸಚಿವರು ಹೇಳಿದರು.

    “ಹಲವು ಪ್ಲಾಟ್‌ಫಾರ್ಮ್‌ಗಳು ಪ್ರದರ್ಶಿಸುತ್ತಿರುವ ಮೋಸದ ಸಾಲದ ಅಪ್ಲಿಕೇಶನ್‌ಗಳ ಜಾಹೀರಾತುಗಳಿಗೆ ನಾವು ಕಡಿವಾಣ ಹಾಕುತ್ತಿದ್ದೇವೆ. ಯಾವುದೇ ಮಧ್ಯವರ್ತಿಯು ಮೋಸದ ಸಾಲದ ಅಪ್ಲಿಕೇಶನ್‌ಗಳ ಜಾಹೀರಾತುಗಳನ್ನು ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ನಿನ್ನೆಯ ಸಲಹೆಯ ಮೂಲಕ ಸ್ಪಷ್ಟಪಡಿಸಿದ್ದೇವೆ. ಏಕೆಂದರೆ ಇದು ಇಂಟರ್​ನೆಟ್​ ಬಳಸುತ್ತಿರುವ ಜನರನ್ನು ತಪ್ಪು ದಾರಿಗೆಳೆಯಲು ಹಾಗೂ ಶೋಷಿಸಲು ಕಾರಣವಾಗುತ್ತದೆ” ಎಂದು ಸಚಿವರು ಹೇಳಿದರು.

    ಕಾನೂನು ಮತ್ತು ಸರ್ಕಾರದ ಕ್ರಮದ ಮೂಲಕ ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಂತರ್ಜಾಲ ವಿಕಸನಗೊಳ್ಳುತ್ತಿದೆ. ನಿಷೇಧಿತ ವಿಷಯದ 11 ಕ್ಷೇತ್ರಗಳನ್ನು ಐಟಿ ನಿಯಮಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅವರು ಹೇಳಿದರು.

    72 ಸಾವಿರ ಮೈಲುಗಲ್ಲು ದಾಟಿ ದಾಖಲೆ ಬರೆದ ಸೂಚ್ಯಂಕ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

    ದಾಖಲೆ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಬೆಳವಣಿಗೆ: ಹೀಗಿವೆ ಐದು ಪ್ರಮುಖ ಕಾರಣಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts