More

    72 ಸಾವಿರ ಮೈಲುಗಲ್ಲು ದಾಟಿ ದಾಖಲೆ ಬರೆದ ಸೂಚ್ಯಂಕ: ಲಾಭ- ನಷ್ಟ ಅನುಭವಿಸಿದ ಷೇರುಗಳು ಯಾವವು?

    ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಎರಡು ಪ್ರಮುಖ ಸೂಚ್ಯಂಕಗಳಾದ ಬಿಎಸ್​ಇ ಮತ್ತು ಮತ್ತು ನಿಫ್ಟಿ ಬುಧವಾರದಂದು ಹೊಸ ಗರಿಷ್ಠ ಮಟ್ಟಕ್ಕೆ ಏರಿ ದಾಖಲೆ ಬರೆದವು.

    ಬಿಎಸ್​ಇ 30- ಸೂಚ್ಯಂಕವು ಐತಿಹಾಸಿಕ 72,000 ಗಡಿಯನ್ನು ದಾಟಿತು. ಇದು ದೇಶದ ಸ್ಥೂಲ ಆರ್ಥಿಕ (ಮ್ಯಾಕ್ರೊ ಎಕಾನಮಿ) ಮೂಲಭೂತ ಅಂಶಗಳು ಮತ್ತು ದೃಢವಾದ ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳ ಮೇಲೆ ಆಶಾವಾದದಿಂದ ಉತ್ತೇಜಿಸಲ್ಪಟ್ಟಿತು.

    ನಿಫ್ಟಿ 50-ಷೇರು ಸೂಚ್ಯಂಕವು ಲೋಹ, ಸರಕು, ಆಟೋ ಮತ್ತು ಬ್ಯಾಂಕಿಂಗ್ ವಲಯಗಳಲ್ಲಿನ ತೀವ್ರ ಖರೀದಿಯಿಂದಾಗಿ 21,654.75 ರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು.

    ಷೇರು ಮಾರುಕಟ್ಟೆಯಲ್ಲಿ ನಾಲ್ಕನೇ ದಿನವಾದ ಬುಧವಾರವೂ ಏರಿಕೆ ಕಂಡುಬಂದಿತು. ಬಿಎಸ್‌ಇ ಸೂಚ್ಯಂಕ 701.63 ಅಂಕ ಅಥವಾ ಶೇಕಡಾ 0.98ರಷ್ಟು ಏರಿಕೆಯಾಗಿ 72,038.43 ರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 783.05 ಅಂಕ ಹೆಚ್ಚಳವಾಗಿ, ಇಂಟ್ರಾ-ಡೇ ಜೀವಿತಾವಧಿಯ ಗರಿಷ್ಠ 72,119.85 ಅಂಕ ತಲುಪಿತ್ತು.

    ನಿಫ್ಟಿ ಸೂಚ್ಯಂಕವು ಕೂಡ 213.40 ಅಂಕ ಅಥವಾ 1 ಪ್ರತಿಶತದಷ್ಟು ಏರಿಕೆಯಾಗಿ 21,654.75 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 234.4 ಅಂಕ ಏರಿ, 21,675.75 ರ ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ ಮಟ್ಟ ತಲುಪಿತ್ತು.

    ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸೆನ್ ಮತ್ತು ಟೂಬ್ರೊ, ಇನ್ಫೋಸಿಸ್ ಮತ್ತು ಬಜಾಜ್ ಫಿನ್‌ಸರ್ವ್ ಮೊದಲಾದ ಷೇರುಗಳು ಲಾಭ ಗಳಿಸಿದವು. ಎನ್‌ಟಿಪಿಸಿ ಮತ್ತು ಟೆಕ್ ಮಹೀಂದ್ರಾ ಷೇರುಗಳು ನಷ್ಟ ಅನುಭವಿಸಿದವು..

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಲಾಭ ದಾಖಲಿಸಿದವು.

    ಐರೋಪ್ಯ ಮಾರುಕಟ್ಟೆಗಳು ಸಕರಾತ್ಮಕವಾಗಿ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳು ಮಂಗಳವಾರ ಲಾಭದಲ್ಲಿ ಮುನ್ನಡೆದವು.

    “ಉತ್ಸಾಹದಲ್ಲಿರುವ ದೇಶೀಯ ಮಾರುಕಟ್ಟೆಯು ಹೊಸ ದಾಖಲೆಯ ಎತ್ತರವನ್ನು ತಲುಪಿದೆ. ಕಳೆದ ವಾರದ ನಷ್ಟದಿಂದ ಸುಲಭವಾಗಿ ಚೇತರಿಸಿಕೊಂಡಿದೆ. ಅಮೆರಿಕ ಫೆಡರಲ್​ನ ಬ್ಯಾಂಕ್​ ಬಡ್ಡಿ ದರ ಕಡಿತದ ನಿರೀಕ್ಷೆಯಲ್ಲಿ ಈ ಮೇಲ್ಮುಖ ಪ್ರವೃತ್ತಿ ಬಂದಿದೆ” ಎಂದು ಪರಿಣತರು ಹೇಳಿದ್ದಾರೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 95.20 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ.

    ಬಿಎಸ್‌ಇ ಸೂಚ್ಯಂಕ ಮಂಗಳವಾರ 229.84 ಅಂಕ ಏರಿಕೆಯಾಗಿ 71,336.80ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕ 91.95 ಅಂಕ ಏರಿ 21,441.35ಕ್ಕೆ ತಲುಪಿತ್ತು.

    ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಈಗ ಕಾನೂನುಬಾಹಿರ ಸಂಘಟನೆ: ಗೃಹ ಸಚಿವಾಲಯ ಹೀಗೆ ಘೋಷಿಸಿದ್ದೇಕೆ?

    ದಾಖಲೆ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಬೆಳವಣಿಗೆ: ಹೀಗಿವೆ ಐದು ಪ್ರಮುಖ ಕಾರಣಗಳು…

    ಕರ್ನಾಟಕದಲ್ಲಿ 3 ಕೋವಿಡ್​ ಸಾವು: ಜೆನ್​.1 ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲಾಗುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts