More

    95 ರಿಂದ 18 ರೂಪಾಯಿಗೆ ಕುಸಿದಿದ್ದ ಆಟೋಮೊಬೈಲ್​ ಷೇರು: ಈಗ ಕೇವಲ 11 ದಿನಗಳಲ್ಲಿ ಬೆಲೆ ದುಪ್ಪಟ್ಟು!!

    ಮುಂಬೈ: ಕಳೆದ ಕೆಲವು ದಿನಗಳಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆಟೋಮೊಬೈಲ್ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳು ಗುರುವಾರ ಶೇ. 10ರಷ್ಟು ಏರಿಕೆಯಾಗಿ 38.19 ರೂ. ತಲುಪಿದವು. ಕಂಪನಿಯ ಷೇರುಗಳ ಬೆಲೆ ಸತತ ಮೂರನೇ ದಿನವೂ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿದೆ. ಈ ಹಿಂದೆ ಜನಪ್ರಿಯವಾಗಿದ್ದ ಅಂಬಾಸಿಡರ್​ ಕಾರನ್ನು ತಯಾರಿಸುತ್ತಿದ್ದ ಕಂಪನಿ ಇದಾಗಿದೆ.

    ಈ ಮೂಲಕ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ ಗುರುವಾರ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿತು. ಕಂಪನಿಯ ಷೇರುಗಳ 52 ವಾರಗಳ ಕನಿಷ್ಠ ಬೆಲೆ 12.92 ರೂ. ಇದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ 95 ಹಾಗೂ ಕನಿಷ್ಠ ರೂ. 2.50 ಇದೆ.

    ಕಳೆದ 11 ವಹಿವಾಟು ದಿನಗಳಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ 110% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಅಂದರೆ, ಕಂಪನಿಯ ಷೇರುಗಳು ಕೇವಲ 11 ದಿನಗಳಲ್ಲಿ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸಿವೆ.

    ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ ಏಪ್ರಿಲ್ 15, 2024 ರಂದು 18.06 ರೂ. ಇತ್ತು. ಈ ಷೇರುಗಳ ಬೆಲೆ 2 ಮೇ 2024 ರಂದು ರೂ 38.19 ಕ್ಕೆ ತಲುಪಿದೆ. ಹಿಂದೂಸ್ತಾನ್ ಮೋಟಾರ್ಸ್ ಷೇರುಗಳು ಕಳೆದ 11 ವಹಿವಾಟು ಅವಧಿಗಳಲ್ಲಿ ಶೇಕಡಾ 111 ಕ್ಕಿಂತ ಹೆಚ್ಚಿನ ಏರಿಕೆಯನ್ನು ಕಂಡಿದೆ. ಕಳೆದ 5 ದಿನಗಳಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ 26% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 30.29ರಿಂದ ರೂ. 38ಕ್ಕೆ ಏರಿಕೆಯಾಗಿದೆ. ಹಿಂದುಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇ. 97ಕ್ಕೂ ಹೆಚ್ಚು ಏರಿಕೆಯಾಗಿದೆ.

    ಕಳೆದ 4 ವರ್ಷಗಳಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕಳೆದ 4 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ 1168% ಏರಿಕೆಯಾಗಿದೆ. ಹಿಂದೂಸ್ತಾನ್ ಮೋಟಾರ್ಸ್ ಷೇರುಗಳ ಬೆಲೆ 27 ಮಾರ್ಚ್ 2020 ರಂದು 3.01 ರೂ. ಇತ್ತು. ಈಗ ರೂ. 38.19 ಕ್ಕೆ ತಲುಪಿದೆ. ಕಳೆದ ಒಂದು ವರ್ಷದಲ್ಲಿ, ಈ ಷೇರುಗಳ ಬೆಲೆ 143% ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ 141% ಹೆಚ್ಚಾಗಿದೆ. ಹಿಂದೂಸ್ತಾನ್ ಮೋಟಾರ್ಸ್ ನ ಮಾರುಕಟ್ಟೆ ಮೌಲ್ಯ ಅಂದಾಜು 797 ಕೋಟಿ ರೂ. ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts