More

    ನನ್ನ ಮುಂದಿನ ಟಾರ್ಗೆಟ್​… ಎದುರಾಳಿ ತಂಡಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಟ್ರಾವಿಸ್​ ಹೆಡ್!​

    ಬೆಂಗಳೂರು: ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಎಲ್ಲರನ್ನೂ ಕಾಡುತ್ತಿದೆ. ಎದುರಾಳಿ ತಂಡಗಳ ವಿರುದ್ಧ ಬೃಹತ್ ಮೊತ್ತ ಗಳಿಸುತ್ತಿದೆ. ಸತತ ಗೆಲುವಿನೊಂದಿಗೆ ಅಬ್ಬರಿಸುತ್ತಿರುವ ಪ್ಯಾಟ್​ ಕಮ್ಮಿನ್ಸ್ ಸೇನೆ ಮೊನ್ನೆ (ಏಪ್ರಿಲ್ 15) ಆರ್​ಸಿಬಿಯನ್ನೂ ಮಣಿಸಿತು. ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ 287 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ತಂಡವೆಂಬ ಹೆಗ್ಗಳಿಕೆ ಗಳಿಸಿತು. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಕಲೆಹಾಕಿದ್ದ ತನ್ನದೇ 277 ರನ್ ದಾಖಲೆಯನ್ನು ಮುರಿದುಹಾಕಿತು. ಅಲ್ಲದೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಹ ಸೋಲಿಸಿದೆ. ತಂಡದ ಈ ವೇಗ ನೋಡಿದರೆ ಈ ಬಾರಿ ಐಪಿಎಲ್​ ಪಟ್ಟಕ್ಕೇರುವುದು ಖಚಿತ ಎನಿಸುತ್ತಿದೆ. ತಂಡದ ಯಶಸ್ಸಿನಲ್ಲಿ ಬ್ಯಾಟಿಂಗ್ ವಿಭಾಗವೂ ಪ್ರಮುಖ ಪಾತ್ರ ವಹಿಸುತ್ತದೆ.

    ಸನ್‌ರೈಸರ್ಸ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದುವರೆಗೂ ಆಡಿದ 5 ಪಂದ್ಯಗಳಲ್ಲಿ 199 ಸ್ಟ್ರೈಕ್ ರೇಟ್‌ನೊಂದಿಗೆ 235 ರನ್ ಗಳಿಸಿದ್ದಾರೆ. ಕ್ರೀಸ್​ಗೆ ಇಳಿದಾಗ ಮೊದಲ ಎಸೆತದಿಂದಲೇ ಬೌಲರ್‌ಗಳನ್ನು ಚಚ್ಚಿ ಬೀಸಾಡುತ್ತಿದ್ದಾರೆ. ಮೊನ್ನೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಕೂಡ ಇದೇ ರೀತಿಯ ವಿಧ್ವಂಸಕ ಆಟವಾಡಿದರು.

    ಕೇವಲ 41 ಎಸೆತಗಳಲ್ಲಿ 102 ರನ್‌ಗಳ ದಾಖಲೆಯ ಶತಕವನ್ನು ಬಾರಿಸಿದರು. ಈ ಪಂದ್ಯ ಮುಗಿದ ಬಳಿಕ ಹೆಡ್​ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೆ, ಆಕ್ರಮಣಕಾರಿ ಆಟವಾಡಲು ಸ್ವಾತಂತ್ರ್ಯ ನೀಡಿದ ನಾಯಕ ಕಮ್ಮಿನ್ಸ್ ಅವರಿಗೆ ಧನ್ಯವಾದಗಳು ಹೇಳಿದರು. ಕೋಚ್ ಡೇನಿಯಲ್ ವೆಟ್ಟೋರಿ ಪಂದ್ಯದ ಗೆಲುವಿನ ಕ್ರೆಡಿಟ್ ನೀಡಿದರು. ಆ ಬಳಿಕ ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಲಿದ್ದೇನೆ ಎಂಬುದನ್ನು ತಿಳಿಸಿದರು.

    ಕಮ್ಮಿನ್ಸ್ ಮತ್ತು ವೆಟ್ಟೋರಿ ಅವರು ಮತ್ತೊಬ್ಬ ಆರಂಭಿಕ ಆಟಗಾರ ಅಭಿಷೇಕ್ ಶರ್ಮಗೆ ನನ್ನೊಂದಿಗೆ ಆಕ್ರಮಣಕಾರಿಯಾಗಿ ಆಡಲು ಸ್ವಾತಂತ್ರ್ಯ ನೀಡಿದರು. ಈಗ ನಮ್ಮ ಮುಂದಿರುವ ಗುರಿ 300 ರನ್. ಮಧ್ಯಮ ಕ್ರಮಾಂಕವು ಹೆನ್ರಿಕ್ ಕ್ಲಾಸೆನ್, ಅಬ್ದುಲ್ ಸಮದ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನೊಳಗೊಂಡ ಪವರ್ ಹಿಟ್ಟಿಂಗ್ ಬ್ಯಾಟರ್​ಗಳನ್ನು ಹೊಂದಿದೆ. ಹಾಗಾಗಿ ಈ ಗುರಿಯನ್ನು ನಾವು ಸಾಧಿಸುತ್ತೇವೆ ಎಂದು ಹೆಡ್ ಎದುರಾಳಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

    ಇದನ್ನು ನೋಡಿದ ನೆಟಿಜನ್‌ಗಳು ಎಸ್‌ಆರ್‌ಎಚ್ ತಂಡವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ. ಇಪ್ಪತ್ತು ದಿನಗಳ ಅಂತರದಲ್ಲಿ ಎರಡು ಬಾರಿ 270 ಪ್ಲಸ್ ಸ್ಕೋರ್ ಅನ್ನು ತಂಡ ಗಳಿಸಿದೆ. 300 ರನ್​ ಬಾರಿಸುವುದು ಕಷ್ಟವೇನಲ್ಲ ಎನ್ನಲಾಗುತ್ತಿದೆ.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸನರೈಸರ್ಸ್​, ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ (34) ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಹೆನ್ರಿಕ್​ ಕ್ಲಾಸೆನ್​ ಅರ್ಧಶತಕದ ಬಲದಿಂದ 3 ವಿಕೆಟ್​ಗೆ 287 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಫಾಫ್​ ಡು ಪ್ಲೆಸಿಸ್​ (62 ರನ್​, 28 ಎಸೆತ, 7 ಬೌಂಡರಿ, 4 ಸಿಕ್ಸರ್​) ಹಾಗೂ ವಿರಾಟ್​ ಕೊಹ್ಲಿ (42 ರನ್​, 20 ಎಸೆತ, 6 ಬೌಂಡರಿ, 2 ಸಿಕ್ಸರ್​) ಒದಗಿಸಿದ ಬಿರುಸಿನ ಆರಂಭ ಹಾಗೂ ಅನುಭವಿ ಬ್ಯಾಟರ್​ ದಿನೇಶ್​ ಕಾರ್ತಿಕ್​ (83 ರನ್​,35 ಎಸೆತ, 5 ಬೌಂಡರಿ, 7 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ ಆರ್​ಸಿಬಿ ತಂಡ 7 ವಿಕೆಟ್​ಗೆ 262 ರನ್​ಗಳಿಸಲಷ್ಟೇ ಶಕ್ತವಾಯಿತು. ಇದು ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತದ ದಾಖಲೆಯಾಗಿದೆ. (ಏಜೆನ್ಸೀಸ್​)

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಆರ್​ಸಿಬಿ ವಿರುದ್ಧ ಟ್ರಾವಿಸ್​ ಹೆಡ್ ವಿನಾಶಕಾರಿ ಬ್ಯಾಟಿಂಗ್​ ಹಿಂದಿದೆ 8 ವರ್ಷದ ಹಳೆಯ ರೋಚಕ ಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts