More

    ಆರ್​ಸಿಬಿ ವಿರುದ್ಧ ಟ್ರಾವಿಸ್​ ಹೆಡ್ ವಿನಾಶಕಾರಿ ಬ್ಯಾಟಿಂಗ್​ ಹಿಂದಿದೆ 8 ವರ್ಷದ ಹಳೆಯ ರೋಚಕ ಕತೆ!

    ಬೆಂಗಳೂರು: ನಿನ್ನೆ (ಏಪ್ರಿಲ್​ 15) ನಡೆದ ಐಪಿಎಲ್​ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ವಿರುದ್ಧ ವಿನಾಶಕಾರಿ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳನ್ನು ಧೂಳೀಪಟ ಮಾಡಿದ ಹೆಡ್​, ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 41 ಎಸೆತಗಳನ್ನು ಎದುರಿಸಿದ ಹೆಡ್​, 9 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 102 ರನ್ ಗಳಿಸಿದರು. ಆದರೆ ಈ ಅಬ್ಬರದ ಬ್ಯಾಟಿಂಗ್​ ಹಿಂದೆ 8 ವರ್ಷದ ಹಿಂದಿನ ದ್ವೇಷ ಅಡಗಿದೆ. ಹೆಡ್​ ಅವರ ಈ ಥಂಡರ್ ಇನ್ನಿಂಗ್ಸ್‌ನ ಹಿಂದಿನ ನೈಜ ಕಥೆಯನ್ನು ನಾವೀಗ ತಿಳಿಯೋಣ.

    ಟ್ರಾವಿಸ್ ಹೆಡ್ ಬಾರಿಸಿದ ಶತಕ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ವೇಗದ ಶತಕವಾಗಿದೆ. ಕೇವಲ 39 ಎಸೆತಗಳಲ್ಲಿ ಆರ್​ಸಿಬಿ ವಿರುದ್ಧ ಶತಕ ಸಿಡಿಸಿದರು. ಬೌಂಡರಿ ಹಾಗೂ ಸಿಕ್ಸರ್​ಗಳ ಸುರಿಮಳೆ ಮೂಲಕ ಎದುರಾಳಿ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಮೊದಲ ಎಸೆತದಿಂದಲೇ ಅಬ್ಬರಿಸಿ ಬೊಬ್ಬಿರಿದರು. ಹೆಡ್ ಅವರು ಇಂಥದ್ದೊಂದು ಅದ್ಭುತ ಇನ್ನಿಂಗ್ಸ್​ ಆಡುವುದಕ್ಕೆ ಒಂದು ಬಲವಾದ ಕಾರಣವಿದೆ. ಇದರ ಹಿಂದೆ 8 ವರ್ಷದ ಹಳೇ ದ್ವೇಷವಿದೆ. ಹಾಗಾದರೆ ಆ ದ್ವೇಷ ಕತೆ ಏನೆಂಬುದನ್ನು ತಿಳಿಯೋಣ.

    ಅದು 2016ರ ಐಪಿಎಲ್ ಸೀಸನ್. ಈ ಸೀಸಸ್​ನಲ್ಲಿ ಟ್ರಾವಿಸ್ ಹೆಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಅವರನ್ನು ತಂಡಕ್ಕೆ ತೆಗೆದುಕೊಂಡರೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆರಂಭಿಕರಾಗಿ ಕಣಕ್ಕಿಳಿಯಬೇಕಿದ್ದ ಅವರನ್ನು ಕೆಳ ಕ್ರಮಾಂಕದಲ್ಲಿ ಇಳಿಸಲಾಗಿತ್ತು. ಅಲ್ಲದೆ, ಆಡಿಸಿದ್ದು ಕೂಡ ಕೆಲವೇ ಪಂದ್ಯಗಳಲ್ಲಿ. ಹೀಗಾಗಿ ತಮ್ಮ ಪ್ರತಿಭೆ ಸಾಬೀತುಪಡಿಸಲು ಸೂಕ್ತ ಅವಕಾಶ ಸಿಗಲಿಲ್ಲ. ಇದರಿಂದ ಹೆಡ್​ಗೆ ತುಂಬಾ ಬೇಸರವಾಗಿತ್ತು. ಅಂದಿನಿಂದಲೇ ಅವರಿಗೆ ಆರ್‌ಸಿಬಿ ಮೇಲೆ ದ್ವೇಷವಿತ್ತು. ಆ ದ್ವೇಷದ ಕಿಚ್ಚು ನಿನ್ನೆಯ ಪಂದ್ಯದಲ್ಲಿ ಹೊರಹೊಮ್ಮಿದೆ. ಶತಕ ಬಾರಿಸುವ ಮೂಲಕ ತನ್ನ 8 ವರ್ಷದ ಹಗೆತನವನ್ನು ತೀರಿಸಿಕೊಂಡಿದ್ದಾರೆ.

    ಯಾವುದೇ ಆಟಗಾರನಿಗೆ ಸರಿಯಾದ ಅವಕಾಶಗಳನ್ನು ನೀಡಿದಾಗ, ಅವನಲ್ಲಿರುವ ನೈಜ ಆಟಗಾರ ಹೊರಬರುತ್ತಾನೆ. ಅದರ ಹೊರತಾಗಿ, ಕಡಿಮೆ ಅವಕಾಶಗಳನ್ನು ನೀಡಿದಾಗ ಹೇಗೆ ಲಯ ಕಂಡುಕೊಳ್ಳಲು ಸಾಧ್ಯ? ಆದ್ದರಿಂದಲೇ ಒಬ್ಬ ಆಟಗಾರನಲ್ಲಿರುವ ಪ್ರತಿಭೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ, ಹೀಗೇ ಆಗುತ್ತದೆ ಎನ್ನುತ್ತಾರೆ ನೆಟ್ಟಿಗರು.

    ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸನರೈಸರ್ಸ್​, ಟ್ರಾವಿಸ್​ ಹೆಡ್​ ಮತ್ತು ಅಭಿಷೇಕ್​ ಶರ್ಮ (34) ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಹೆನ್ರಿಕ್​ ಕ್ಲಾಸೆನ್​ ಅರ್ಧಶತಕದ ಬಲದಿಂದ 3 ವಿಕೆಟ್​ಗೆ 287 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಫಾಫ್​ ಡು ಪ್ಲೆಸಿಸ್​ (62 ರನ್​, 28 ಎಸೆತ, 7 ಬೌಂಡರಿ, 4 ಸಿಕ್ಸರ್​) ಹಾಗೂ ವಿರಾಟ್​ ಕೊಹ್ಲಿ (42 ರನ್​, 20 ಎಸೆತ, 6 ಬೌಂಡರಿ, 2 ಸಿಕ್ಸರ್​) ಒದಗಿಸಿದ ಬಿರುಸಿನ ಆರಂಭ ಹಾಗೂ ಅನುಭವಿ ಬ್ಯಾಟರ್​ ದಿನೇಶ್​ ಕಾರ್ತಿಕ್​ (83 ರನ್​,35 ಎಸೆತ, 5 ಬೌಂಡರಿ, 7 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ ಆರ್​ಸಿಬಿ ತಂಡ 7 ವಿಕೆಟ್​ಗೆ 262 ರನ್​ಗಳಿಸಲಷ್ಟೇ ಶಕ್ತವಾಯಿತು. ಇದು ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತದ ದಾಖಲೆಯಾಗಿದೆ. (ಏಜೆನ್ಸೀಸ್​)

    ಟ್ರಾವಿಸ್​​​ ಹೆಡ್​ ವಿನೂತನ ಶತಕ ಆಚರಣೆಯ ಹಿಂದಿರುವ ಅರ್ಥ ಗೊತ್ತಾ? ಆರ್​ಸಿಬಿ ವಿರುದ್ಧದ ಸೇಡಿಗಿದೆ ಲಿಂಕ್​!

    ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್​ ಟ್ಯಾಂಪರಿಂಗ್; ಆರ್​ಸಿಬಿ ನಾಯಕನ ವಿವರಣೆ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts