ನ್ಯೂಸ್

ಅಮೆರಿಕಾದ ಸ್ಯಾನ್​​ಫ್ರಾನ್ಸಿಸ್ಕೋ ಕನ್ನಡ ನಾಟಕ ಪ್ರಿಯರಿಗೆ ಗುಡ್​ ನ್ಯೂಸ್​!

ಸ್ಯಾನ್​​ಫ್ರಾನ್ಸಿಸ್ಕೋ: ಅಮೆರಿಕಾದ ಸ್ಯಾನ್​​ಫ್ರಾನ್ಸಿಸ್ಕೋದಲ್ಲಿರುವ ಕನ್ನಡ ನಾಟಕ ಪ್ರಿಯರಿಗೆ ಸಿಹಿ ಸುದ್ದಿಯೊಂದು ಲಭಿಸಿದ್ದು, ​ಅಮೆರಿಕ ದೇಶದ 'ರಂಗಾಮೇರಿಕಾ' ತಂಡಕ್ಕೆ ಇದೀಗ ಹತ್ತು ವರ್ಷದ ಸಂಭ್ರಮ.

ಈ 10ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ 'ಸೂಪರ್​ ಸಂಸಾರ' ಹಾಸ್ಯ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಸಂತೋಷ್​ ಪವಾರ್​ ಬರವಣಿಗೆ ಮಾಡಿದ್ದು, ಯಶವಂತ್​ ಸರ್​ದೇಶಪಾಂಡೆ ಅನುವಾದಿಸಿದ್ದಾರೆ. ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶವಂತ್ ನಿರ್ದೇಶನದ ಸೂಪರ್ ಸಂಸಾರ ನಾಟಕ ಪ್ರದರ್ಶನಕ್ಕೆ ದಿನಾಂಕ ಕೂಡ ನಿಗದಿಯಾಗಿದೆ.

ಇದೇ ಏಪ್ರಿಲ್ 7 ರಂದು ಮಧ್ಯಾಹ್ನ 3:30ಕ್ಕೆ 'ಸೂಪರ್​ ಸಂಸಾರ' ಹಾಸ್ಯ ನಾಟಕ ಪ್ರದರ್ಶನವಾಗಲಿದ್ದು, ಕುಪರ್ಟಿನೋದಲ್ಲಿರುವ ಡಿ ಎಂಜಾ ಕಾಲೇಜಿನ ವಿಜುವಲ್ ಅಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್​ನಲ್ಲಿ ನಾಟಕ ನಡೆಯಲಿದೆ.