ವಾಷಿಂಗ್ಟನ್ ಡಿಸಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಕ್ಕಿಬಿದ್ದಿರುವ ನಾಸಾ(NASA) ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 2024ರ ಕ್ರಿಸ್ಮಸ್ ಅನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಆಚರಣೆಯ ಫೋಟೋಗಳಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ಸಾಂತಾ ಟೋಪಿಗಳನ್ನು ಧರಿಸಿರುವುದನ್ನು ನೋಡಬಹುದು. ಇತರ ಕ್ರಿಸ್ಮಸ್ ಅಲಂಕಾರಗಳು ಸಹ ಫೋಟೋದಲ್ಲಿ ಗೋಚರಿಸುತ್ತವೆ. ಒಂದೆಡೆ ಈ ಚಿತ್ರಗಳು ಜನರ ಮುಖದಲ್ಲಿ ಸಂತಸ ತಂದಿದ್ದರೆ ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿವೆ.
ಇದನ್ನು ಓದಿ: ಬಾಹ್ಯಾಕಾಶದಲ್ಲಿ ನೀರು ಕುಡಿಯುವುದೇಗೆ; ಸುನಿತಾ ವಿಲಿಯಮ್ಸ್ Demonstrate ಮಾಡಿರುವ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ..
ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿಗಳು ಬಾಹ್ಯಾಕಾಶದಲ್ಲಿ ಸಾಂತಾ ಟೋಪಿಗಳನ್ನು ಧರಿಸಿರುವ ಫೋಟೋಗಳನ್ನು ನಾಸಾ ಅಪ್‌ಲೋಡ್ ಮಾಡಿದೆ. ಈಗ ನೆಟ್ಟಿಗರು ಈ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಫೋಟೋ ನೋಡಿದವರು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಹೋಗುವಾಗ ಅವರೊಂದಿಗೆ ಕ್ರಿಸ್ಮಸ್ ಟೋಪಿ ಮತ್ತು ಇತರ ಆಚರಣೆಯ ವಸ್ತುಗಳನ್ನು ತೆಗೆದುಕೊಂಡಿದ್ದರೆ ಎಂದು ಕೇಳುತ್ತಿದ್ದಾರೆ. ಇದರರ್ಥ ಅವರನ್ನು ದೀರ್ಘ ಕಾರ್ಯಾಚರಣೆಗೆ ಕಳುಹಿಸಲಾಗಿದೆ ಆದರೆ ಈ ಸತ್ಯವನ್ನು ಮರೆಮಾಡಲಾಗಿದೆ ಎಂಬುದಾಗಿದೆ. ಇನ್ನೊಬ್ಬರು ಜೂನ್‌ನಲ್ಲಿ 8 ದಿನಗಳ ಕಾರ್ಯಾಚರಣೆಗೆ ಹೋದವರು ಇದೇ ಜನರು? ಎಂದು ಹೇಳಿದ್ದಾರೆ. ಈ ಹೊಸ ವಿವಾದ ಬೆಳಕಿಗೆ ಬಂದ ನಂತರ ನಾಸಾ ಕೂಡ ಈ ಬಗ್ಗೆ ತನ್ನ ಉತ್ತರವನ್ನು ನೀಡಿದೆ.
NASA ಆರೋಪಗಳನ್ನು ತಿರಸ್ಕರಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾದ ತಾಜಾ ಸರಕುಗಳ ವಿತರಣೆಗಳು ಕ್ರಿಸ್ಮಸ್ ಅಲಂಕಾರಗಳು, ವಿಶೇಷ ಉಡುಗೊರೆಗಳು ಮತ್ತು ಹಬ್ಬದ ಆಹಾರವನ್ನು ಒಳಗೊಂಡಿವೆ ಎಂದು ಸ್ಪಷ್ಟಪಡಿಸಿದೆ. ಈ ವಿತರಣೆಯನ್ನು ನವೆಂಬರ್ ಅಂತ್ಯದಲ್ಲಿ SpaceX ಮೂಲಕ ಮಾಡಲಾಯಿತು. ಪ್ರತಿ ವರ್ಷ ತಾಜಾ ಪಡಿತರ ಮತ್ತು ಅಗತ್ಯ ವಸ್ತುಗಳ ಜತೆಗೆ ಹಬ್ಬಗಳ ವಿಶೇಷ ವಸ್ತುಗಳನ್ನು ಐಎಸ್ಎಸ್ಗೆ ಕಳುಹಿಸಲಾಗುತ್ತದೆ ಎಂದು ನಾಸಾ ಹೇಳಿದೆ.
ಐಎಸ್‌ಎಸ್‌ನಲ್ಲಿರುವ ಏಳು ಗಗನಯಾತ್ರಿಗಳಿಗೆ ಕಳುಹಿಸಲಾದ ಪ್ಯಾಕೇಜುಗಳಲ್ಲಿ ಹ್ಯಾಮ್, ಟರ್ಕಿ, ತರಕಾರಿಗಳು, ಪೈಗಳು ಮತ್ತು ಕುಕೀಗಳಂತಹ ರುಚಿಕರವಾದ ಆಹಾರಗಳು ಸೇರಿವೆ. ಜತೆಗೆ ಒಂದು ಸಾಂಟಾ ಹ್ಯಾಟ್ ಮತ್ತು ಒಂದು ಸಣ್ಣ ಕ್ರಿಸ್ಮಸ್ ಮರವನ್ನು ಸಹ ಕಳುಹಿಸಲಾಗಿದೆ. ಸುನೀತಾ ಮತ್ತು ಬುಚ್ ತಮ್ಮ ಕ್ರಿಸ್ಮಸ್ ವಿಡಿಯೋವನ್ನು ಈ ಅಲಂಕಾರಗಳೊಂದಿಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿಯನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಅವರು ಈಗ ಮಾರ್ಚ್ 2025ರ ಅಂತ್ಯದ ವೇಳೆಗೆ ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಮರಳಲು ಆಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲು ಅವರ ವಾಪಸಾತಿಯನ್ನು ಫೆಬ್ರವರಿ 2025ಕ್ಕೆ ನಿಗದಿಪಡಿಸಲಾಗಿತ್ತು.(ಏಜೆನ್ಸೀಸ್)