ನ್ಯೂಸ್

ಹೊಂಬಾಳೆ ಫಿಲ್ಮ್ಸ್​ ಜತೆ ಕಿಚ್ಚ ಸುದೀಪ್ ಹೊಸ ಸಿನಿಮಾ?

ಬೆಂಗಳೂರು: ನಟ ಕಿಚ್ಚ ಸುದೀಪ್ ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಅನ್ನೋ ಪ್ರಶ್ನೆ ಇದೀಗ ಅಭಿಮಾನಿಗಳ ವಲಯದಲ್ಲಿ ಎದ್ದಿದೆ. ಇದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್​​ನ ಕಾರ್ತಿಕ್ ಗೌಡ ಹಂಚಿಕೊಂಡಿರುವ ಫೋಟೋ.

ಹೌದು, ಕಾರ್ತಿಕ್ ಗೌಡ ಸುದೀಪ್​ ಜತೆಗಿನ ಫೋಟೋವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ 'ಕಿಚ್ಚ ಸುದೀಪ್ ಅವರೊಂದಿಗೆ ಹೊಸ ಆರಂಭ ಎಂದು' ಬರೆದುಕೊಂಡಿದ್ದಾರೆ. ಕಾರ್ತಿಕ್ ಗೌಡ ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸುದೀಪ್​ ಹೊಂಬಾಳೆ ಬ್ಯಾನರ್​ನ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವರ್ಷ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬಂದಿತ್ತು. ಬಾಕ್ಸ್​ ಆಫೀಸ್​ಲ್ಲಿ ಉತ್ತಮ ದಾಖಲೆಯನ್ನೂ ಬರೆದಿತ್ತು. ಮುಂದೆ ಉಪೇಂದ್ರ ಜತೆಗಿನ ಕಬ್ಜ ಸಿನಿಮಾದಲ್ಲಿ ಸುದೀಪ್​ ತೆರೆ ಹಂಚಿಕೊಂಡಿದ್ದು, ಸಿನಿಮಾ ಬಿಡುಗಡೆಯಾಗಬೇಕಿದೆ.

ಕೆಜಿಎಫ್​ ಸಿನಿಮಾ ನಿರ್ಮಾಣ ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​. ಸದ್ಯ ಹೊಂಬಾಳೆ ಬ್ಯಾನರ್​​ನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಮುಂದೆ ರಾಘವೇಂದ್ರ ಸ್ಟೋರ್ಸ್​, ಸಲಾರ್​ ಸಿನಿಮಾ ಬಿಡುಗಡೆಯಾಗಬೇಕಿದೆ. ಹೊಂಬಾಳೆ ಬ್ಯಾನರ್​ನಲ್ಲಿ ಮಲಯಾಳಂ ಸೂಪರ್​​ ಸ್ಟಾರ್​ ಫಹದ್ ಫಾಸಿಲ್ ನಟನೆಯ ಧೂಂ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ.

ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​​ನಲ್ಲಿ ಹೊಸ ಪ್ಯಾನ್​ ಇಂಡಿಯಾ ಸಿನಿಮಾ ಘೋಷಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕಾಣಸಿಕೊಳ್ಳುತ್ತಾರೆ ಎಂಬ ಸುದ್ದಿಯಿದ್ದು, ಇದು ನಿಜವಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.