ನ್ಯೂಸ್

VIDEO| ಲೈವ್​ ಕ್ಲಾಸ್​ನಲ್ಲೇ ಶಿಕ್ಷಕನಿಗೆ ಚಪ್ಪಲಿಯಲ್ಲಿ ಥಳಿಸಿದ ವಿದ್ಯಾರ್ಥಿ

Webdesk - Manjunatha B

ನವದೆಹಲಿ: ವಿಲಕ್ಷಣಕಾರಿ ಘಟನೆಯೊಂದರಲ್ಲಿ ಲೈವ್​ ಕ್ಲಾಸ್​ನಲ್ಲೇ ವಿದ್ಯಾರ್ಥಿಯೋರ್ವ ಶಿಕ್ಷಕರಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕಳವಳ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯೋರ್ವ ಪಾಠ ಮಾಡುತ್ತಿರುವ ಶಿಕ್ಷಕರೊಬ್ಬರ ಮೇಲೆ ಏಕಾಏಕಿ ದಾಳಿ ಮಾಡಿ ತನ್ನ ಚಪ್ಪಲಿಯಿಂದ ಹೊಡೆಯಲು ಶುರು ಮಾಡುತ್ತಾನೆ. ಆತನಿಂದ ಶಿಕ್ಷಕ ತಪ್ಪಿಸಿಕೊಂಡು ಬೇರೆಡೆ ಹೋದರು ಬಿಡದ ವಿದ್ಯಾರ್ಥಿ ಹಲ್ಲೆ ಮಾಡಲು ಮುಂದುವರೆಸುತ್ತಾನೆ. ಈ ಘಟನೆಯು ಫಿಸಿಕ್ಸ್​ವಾಲಾ ಎಂಬ ಆನ್​ಲೈನ್​ ಕ್ಲಾಸ್​ನಲ್ಲಿ ನಡೆದಿದೆ.

ಯಾವ ಕಾರಣಕ್ಕೆ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಕಳವಳ ಹಾಗೂ ಚರ್ಚೆಯನ್ನು ಹುಟ್ಟುಹಾಕಿದೆ. ಫಿಸಿಕ್ಸ್​ವಾಲಾ ಅಪ್ಲಿಕೇಶನ್ ತನ್ನ ಶೈಕ್ಷಣಿಕ ವಿಷಯ ಮತ್ತು ಬೆಂಬಲಕ್ಕಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಆದರೆ, ಹಲ್ಲೆಯ ವಿಡಿಯೋ ಡಿಜಿಟಲ್ ಯುಗದಲ್ಲಿ ಶಿಕ್ಷಣತಜ್ಞರು ಎದುರಿಸುತ್ತಿರುವ ಸವಾಲುಗಳ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.