ಕೋಲಾರ: ಶಾಲೆಯ ವಿದ್ಯಾರ್ಥಿಗಳೂ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದು ಅಂಥದ್ದೇ ಇನ್ನೊಂದು ಆತ್ಮಹತ್ಯೆ ನಡೆದಿದೆ. ಇಲ್ಲಂತೂ ವಿದ್ಯಾರ್ಥಿ ತೀರಾ ಕ್ಷುಲ್ಲಕ ಕಾರಣಕ್ಕೆ ತಾನೇ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಈ ಆತ್ಮಹತ್ಯೆ ನಡೆದಿದೆ. ಒಂಬತ್ತನೇ ತರಗತಿ ವಿದ್ಯಾರ್ಥಿ ಉದಯ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವ. ಈತ ಇಲ್ಲಿನ ತಾತಿಕಲ್ ಬಳಿ ಇರುವ ಸರ್ಕಾರಿ ಆದರ್ಶ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಈತನಿಗೆ ಪಾಲಕರು ಬುದ್ಧಿಮಾತು ಹೇಳಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ತೀವ್ರವಾಗಿ ನೊಂದಿದ್ದ ಸೋಮವಾರ ವಿಷ ಸೇವಿಸಿದ್ದ. ಬಳಿಕ ತೀವ್ರ ಅಸ್ವಸ್ಥನಾದ ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದಾಗ್ಯೂ ಈತ ಇಂದು ಸಾವಿಗೀಡಾಗಿದ್ದಾನೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.