ನ್ಯೂಸ್

ಪ್ರತಿದಿನ ರೈಲಿನಲ್ಲಿ ಸಂಚರಿಸುವ ಶ್ವಾನದ ಕಥೆ ಗೊತ್ತಾ?

ಮುಂಬೈ: ನಾವು ಪ್ರತಿನಿತ್ಯ ಒಂದು ಸ್ಥಳದಿಂದ ಇನ್ನೊಂದು ಜಾಗಕ್ಕೆ ಹೋಗಲು ನಗರ ಸಾರಿಗೆ, ಮೆಟ್ರೋ ಹಾಗು ಮೆಮು ರೈಲುಗಳನ್ನು ಬಳಸುತ್ತೇವೆ.

ಆದರೆ, ವಿಚಿತ್ರ ಘಟನೆ ಒಂದರಲ್ಲಿ ನಾಯಿಯೊಂದು ಪ್ರತಿನಿತ್ಯ ರೈಲಿನಲ್ಲಿ ಒಂದು ಜಾಗದಿಂದ ಮತ್ತೊಂದು ಸ್ಥಳಕ್ಕೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಹುಪರಾಕ್​ ಎಂದ ನೆಟ್ಟಿಗರು

ಪ್ರತಿದಿನ ಈ ನಾಯಿ ಬೋರಿವಲ್ಲಿ ನಿಲ್ದಾಣದಿಂದ ಅಂಧೇರಿವರೆಗೆ ರೈಲಿನಲ್ಲಿ ಪ್ರಯಾಣಿಸುತ್ತದೆ ಎಂದರೆ ನೀವು ನಂಬುತ್ತಿರ. ಪ್ರತಿನಿತ್ಯ ಈ ಶ್ವಾನ ಪ್ರಯಾಣಿಸುತ್ತಿರುವ ವಿಡಿಯೋವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನಾಯಿಯ ಚಾತುರ್ಯತೆಗೆ ನೆಟಗ್ಟಿಗರು ಬಹುಪರಾಕ್​ ಎಂದಿದ್ದಾರೆ ಮತ್ತು 5ಲಕ್ಷಕ್ಕೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ.

ವಿಡಿಯೋದಲ್ಲಿ ಏನಿದೆ?

ಸದ್ಯ ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ನಾಯಿ ಮುಂಬೈನ ಬೋರಿವಲ್ಲಿ ನಿಲ್ದಾಣದಲ್ಲಿ ರೈಲು ಏರುತ್ತದೆ ಮತ್ತು ಅಂಧೇರಿ ನಿಲ್ದಾಣ ಬಂದ ಕೂಡಲೇ ತಕ್ಷಣ ಇಳಿದು ಹೊರಡುತ್ತದೆ.

ಈ ವಿಡಿಯೋಗೆ ನೆಟ್ಟಿಗರು ಭಿನ್ನ-ವಿಭಿನ್ನ ಕಮೆಂಟ್​ಗಳನ್ನು ಹಾಕಿದ್ದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಇತರರಿಗೆ ಶೇರ್​ ಮಾಡುತ್ತಿದ್ದಾರೆ.