ಮುಂಬೈ: ಒಮ್ಮೆ ಹುಡುಗಿಯನ್ನು ಹಿಂಬಾಲಿಸಿದರೆ ಅದು ಹಿಂಬಾಲಿಸಿದಂತೆ ಆಗುವುದಿಲ್ಲ. ಅಲ್ಲದೆ, ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್ 354(D) ಅಡಿಯಲ್ಲಿ ಒಮ್ಮೆ ಹಿಂಬಾಲಿಸಿದರೆ ಈ ಕಾನೂನಿನಡಿಯಲ್ಲಿ ಬರುವುದಿಲ್ಲ. ಹಿಂಬಾಲಿಸುವುದು ಪದೇಪದೆ ಪುನಾರ್ವತನೆಯಾದರೆ ಮತ್ತು ನಡುವಳಿಕೆ ಬದಲಾಣೆಯಾದರೆ ಕಾನೂನು ಅನ್ವಯ ಆಗುತ್ತದೆ ಎಂದು ಬಾಂಬೆ ಹೈಕೋರ್ಟ್(High Court) ಶನಿವಾರ ತೀರ್ಪು ನೀಡಿದೆ.
14 ವರ್ಷದ ಬಾಲಕಿಗೆ ಸಂಬಂಧಿಸಿದ ಪ್ರಕರಣದಲ್ಲಿ ಲೈಂಗಿಕ ಕಿರುಕುಳ ಮತ್ತು ಅತಿಕ್ರಮ ಪ್ರವೇಶದ ಆರೋಪದ ಮೇಲೆ 19 ವರ್ಷದ ಇಬ್ಬರು ಯುವಕರನ್ನು ಒಳಗೊಂಡ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜಿ.ಎ.ಸನಪ್ ಅವರಿದ್ದ ಪೀಠದಿಂದ ಈ ತೀರ್ಪು ಹೊರಡಿಸಿದೆ.
ಒಬ್ಬ ಹುಡುಗಿಯನ್ನು ಹಿಂಬಾಲಿಸುವ ಒಂದು ನಿದರ್ಶನವನ್ನು IPC ಅಡಿಯಲ್ಲಿ ಹಿಂಬಾಲಿಸುವುದು ಎಂದು ವರ್ಗೀಕರಿಸಲಾಗುವುದಿಲ್ಲ. ಅಂತಹ ಅಪರಾಧವನ್ನು ಪರಿಗಣಿಸಲು ಪುನರಾವರ್ತಿತ ಅಥವಾ ನಿರಂತರ ಕೃತ್ಯಗಳ ಪುರಾವೆ ಕಾನೂನಿನ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣವು 2020ರ ಜನವರಿದು, ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿ ಅವಳನ್ನು ಮದುವೆಯಾಗುವ ಬಯಕೆಯನ್ನು ಹೇಳಿದ್ದಾನೆ. ಆದರೆ, ಬಾಲಕಿಯ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದಾಳೆ. ಅಲ್ಲದೆ, ಆಕೆಯ ತಾಯಿ ಹುಡುಗನಿಗೆ ಮತ್ತು ಕುಟುಂಬಸ್ಥರಿಗೆ ಬುದ್ಧಿ ಹೇಳಿದ್ದಾಳೆ. ಇಷ್ಟದರೂ ಆತ ಆಕೆಗೆ ಕಿರುಕುಳ ನೀಡುತ್ತಲೇ ಇದ್ದ.
2020ರ ಆಗಸ್ಟ್ 26ರಂದು, ಆರೋಪಿಯು ಹುಡುಗಿಯ ಮನೆಗೆ ಅತಿಕ್ರಮವಾಗಿ ನುಗ್ಗಿ, ಆಕೆಯ ಬಾಯಿಯನ್ನು ಬಿಗಿದು, ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಆದರೆ, ಘಟನೆ ವೇಳೆ ಎರಡನೇ ಆರೋಪಿ ಮನೆಯ ಹೊರಗೆ ನಿಂತಿದ್ದ ಎನ್ನಲಾಗಿದೆ. ವಿಚಾರಣಾ ನ್ಯಾಯಾಲಯವು ಐಪಿಸಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಹಿಂಬಾಲಿಸುವುದು, ಲೈಂಗಿಕ ಕಿರುಕುಳ, ಮನೆ ಅತಿಕ್ರಮಣ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಅನೇಕ ಆರೋಪಗಳ ಮೇಲೆ ಇಬ್ಬರನ್ನೂ ದೋಷಿ ಎಂದು ಈ ಹಿಂದೆ ಸ್ಥಳೀಯ ಕೋರ್ಟ್ ತೀರ್ಪು ನೀಡಿತ್ತು.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಅವ್ಯವಹಾರ ಅನವರತ: ಬಿ.ವೈ.ವಿಜಯೇಂದ್ರ ಆರೋಪ | Cong govt irregularity continued
ಮನೆಯ ಹೊರಗೆ ಕಾವಲು ಕಾಯುವುದನ್ನು ಮೀರಿ ಯಾವುದೇ ಸಕ್ರಿಯ ಪಾತ್ರದ ಅನುಪಸ್ಥಿತಿಯನ್ನು ಉಲ್ಲೇಖಿಸಿ ನ್ಯಾಯಾಲಯವು ಎರಡನೇ ಆರೋಪಿಯನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದರೆ, ಲೈಂಗಿಕ ಕಿರುಕುಳಕ್ಕಾಗಿ ಐಪಿಸಿಯ ಸೆಕ್ಷನ್ 354 (ಎ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಪ್ರಾಥಮಿಕ ಆರೋಪಿಯ ಶಿಕ್ಷೆಯನ್ನು ಎತ್ತಿಹಿಡಿದಿದೆ.