Sonam Raghuvanshi: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಸೋನಮ್ ರಘುವಂಶಿ ಮತ್ತು ಆಕೆಯ ಪ್ರಿಯಕರ ಎ2 ಆರೋಪಿ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಪ್ರಸ್ತುತ, ಶಿಲ್ಲಾಂಗ್ ಜೈಲಿನಲ್ಲಿರುವ ಸೋನಮ್, ಇದೀಗ ಒಂದು ತಿಂಗಳು ಸೆರೆಮನೆ ವಾಸಕ್ಕೆ ತತ್ತರಿಸಿದ್ದಾಳೆ.
ಪ್ರಿಯಕರ ರಾಜ್ ಕುಶ್ವಾ ಜೊತೆಗಿನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಪತಿ ರಾಜಾ ರಘುವಂಶಿಗೆ ಹನಿಮೂನ್ ನೆಪದಲ್ಲಿ ಗುಂಡಿ ತೋಡಿದ ಸೋನಮ್ ಸದ್ಯ ಜೈಲಿನ ಕತ್ತಲೆ ಕೋಣೆಯಲ್ಲಿ ನರಳಾಟ ಅನುಭವಿಸುತ್ತಿದ್ದಾಳೆ. ಇದಕ್ಕೆ ಆಕೆಯ ಕುಟುಂಬಸ್ಥರೇ ಜ್ವಲಂತ ಸಾಕ್ಷಿ. ಪ್ರಕರಣ ನಡೆದ ದಿನದಿಂದ ಇಲ್ಲಿಯವರೆಗೆ ಸೋನಮ್ ನೋಡಲು ಆಕೆಯ ಕುಟುಂಬಸ್ಥರು ಆಗಮಿಸಿಲ್ಲ. ಸೋನಮ್ ಕುಟುಂಬದವರು ಮಾತ್ರವಲ್ಲದೇ ಆರೋಪಿಗೆ ಸಂಬಂಧಪಟ್ಟಂತೆ ಯಾರೊಬ್ಬರೂ ಸೋನಮ್ ಭೇಟಿಯಾಗಲು ಬಂದಿಲ್ಲ.
ವರದಿಗಳ ಪ್ರಕಾರ, ಜೈಲಿನ ವಾಸಕ್ಕೆ ಒಗ್ಗಿಕೊಂಡಿರುವ ಸೋನಮ್, ಇತರ ಮಹಿಳಾ ಕೈದಿಗಳಂತೆಯೇ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳುತ್ತಾಳೆ. ಜೈಲಿನ ಮಾರ್ಗಸೂಚಿಗಳನ್ನು ನಿಗದಿಪಡಿಸಿರುವ ಸಮಯಕ್ಕೆ ಅನುಗುಣವಾಗಿ ಅನುಸರಿಸುತ್ತಿದ್ದಾಳೆ. ತನ್ನೊಂದಿಗೆ ಜೈಲಿನಲ್ಲಿರುವ ಮಹಿಳಾ ಕೈದಿಗಳೊಡನೆ ಅಥವಾ ಜೈಲಧಿಕಾರಿಗಳ ಜೊತೆಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಮ್ ಏನ್ನನ್ನು ಮಾತನಾಡಿಲ್ಲ ಎನ್ನಲಾಗಿದೆ.
ಸೋನಮ್ ಇರುವ ಕೋಣೆಯಲ್ಲಿ ನೋಡಲು ಟಿವಿ ವ್ಯವಸ್ಥೆಯಿದೆ. ಇಲ್ಲಿಯವರೆಗೆ ಆಕೆಗೆ ಯಾವುದೇ ವಿಶೇಷ ಕೆಲಸವನ್ನೂ ನಿಯೋಜಿಸಿಲ್ಲ. ಮೂಲಗಳ ಪ್ರಕಾರ, ಆಕೆಗೆ ಹೊಲಿಗೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳನ್ನು ಕಲಿಸಲು ಜೈಲಧಿಕಾರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ. ಜೈಲಿನ ನಿಯಮ ಅನುಸಾರ, ಸೋನಮ್ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶವಿದೆ. ಆದ್ರೆ, ಇದುವರೆಗೆ ಯಾರೂ ಸಹ ಆಕೆಯನ್ನು ನೋಡುವ ಮನಸ್ಸು ಮಾಡಿಲ್ಲ.
ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯೇ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಯಿತು. ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿತು,(ಏಜೆನ್ಸೀಸ್).