ನ್ಯೂಸ್

ಮದುವೆ ಬಳಿಕ ಸೋನಾಕ್ಷಿ ಮೊದಲ ರ‍್ಯಾಂಪ್ ವಾಕ್; ಪಿಂಕ್​ ಗೌನ್​ ತೊಟ್ಟು ಮಿಂಚಿದ ನಟಿ

ಮುಂಬೈ: ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಜಹೀರ್ ಇಕ್ಬಾಲ್ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು. ಸದ್ಯ ಸೋನಾಕ್ಷಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಈ ಮೊದಲು ಸೋನಾಕ್ಷಿ ಸಿನ್ಹಾ ರ‍್ಯಾಂಪ್‌ನಲ್ಲಿ ಹಲವು ಬಾರಿ ಮ್ಯಾಜಿಕ್ ತೋರಿಸುತ್ತಿರುವುದನ್ನು ನೋಡಲಾಗಿದೆ. ಆದರೆ ಈ ಬಾರಿ ರ‍್ಯಾಂಪ್​ ವಾಕ್​ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಇದು ಮದುವೆಯ ನಂತರ ಸೋನಾಕ್ಷಿ ಅವರ ಮೊದಲ ರ‍್ಯಾಂಪ್ ವಾಕ್ ಆಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸೋನಾಕ್ಷಿ ಮೊದಲ ಬಾರಿಗೆ ರ‍್ಯಾಂಪ್ ವಾಕ್ ಮಾಡಿದ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಸದ್ಯ ಆಕೆಯ ಈ ಹೊಸ ಲುಕ್ ಸಾಕಷ್ಟು ಚರ್ಚೆಯಾಗುತ್ತಿದೆ. ಫ್ಯಾಷನ್ ಶೋಗಾಗಿ ರ‍್ಯಾಂಪ್ ವಾಕ್ ಮಾಡಿದ್ದು ಮಾತ್ರವಲ್ಲದೆ ಶೋ ಸ್ಟಾಪರ್ ಕೂಡ ಆದರು. ಅದಷ್ಟೇ ಅಲ್ಲದೆ ಸೋನಾಕ್ಷಿ ಕಾರ್ಯಕ್ರಮದ ವೇಳೆ ದಿ ಕಾರ್ಡಿಗನ್ಸ್‌ನ 'ಲವ್‌ಫೂಲ್' ಹಾಡಿಗೆ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ನಟಿ, ನಾನು ನನ್ನ ವೈವಾಹಿಕ ಜೀವನವನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ. ಮದುವೆಯ ನಂತರವೂ ಕೆಲಸ ಮಾಡಲು ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ನಾನು ಏನೇ ಮಾಡಿದರೂ, ನನ್ನ ಕುಟುಂಬದಿಂದ ನನಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಹಾಗಾಗಿ ಕೆಲವೊಮ್ಮೆ ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ಆದಿತ್ಯ ಸರ್ಪೋತದಾರ್ ನಿರ್ದೇಶನದ ಹಾರರ್-ಕಾಮಿಡಿ ಚಿತ್ರ 'ಕಾಕುಡ'ದಲ್ಲಿ ಸೋನಾಕ್ಷಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಜುಲೈ 12 ರಂದು ಬಿಡುಗಡೆಯಾಯಿತು.(ಏಜೆನ್ಸೀಸ್​​)