ನ್ಯೂಸ್

'ಭಾರತದ ರಾಜಧಾನಿ ಯಾವುದು'? ಬುದ್ಧಿವಂತ ಮಗ ಎಂದ ಅಪ್ಪನಿಗೆ ಎದುರಾಗಿದ್ದು ಭಾರೀ ಮುಖಭಂಗ!

ಮೋಹನ್​ ಶೆಟ್ಟಿ

ನವದೆಹಲಿ: ತಂದೆಯೊಬ್ಬರು ತನ್ನ ಪುತ್ರ ಅತೀ ಬುದ್ಧಿವಂತ, ತರಗತಿಯಲ್ಲಿ ಟಾಪರ್​, ಅವನ ಬುದ್ಧಿಶಕ್ತಿ ನಿಜಕ್ಕೂ ಊಹೆಗೂ ಮೀರಿದ್ದು. ನೀವು ಎಂತಹ ಪ್ರಶ್ನೆಯನ್ನು ಬೇಕಾದರೂ ಕೇಳಿ, ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿಯಾದರೂ ಕೇಳಿ ನೋಡಿ, ಅವನು ಉತ್ತರಿಸುತ್ತಾನೆ ಎಂದೆಲ್ಲಾ ಮಗನನ್ನು ಕೊಂಡಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪತ್ರಕರ್ತರೊಬ್ಬರ ಜತೆ ಮಾತನಾಡಿದ ಬಾಲಕ, ತಂದೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದ ದೃಶ್ಯ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನನ್ನ ಮಗ ತರಗತಿಯಲ್ಲಿ ಟಾಪರ್, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇವನು ಚೆನ್ನಾಗಿ ಓದುತ್ತಾನೆ, ಹಲವು ವಿಷಯಗಳನ್ನು ಅರಿತುಕೊಂಡಿದ್ದಾನೆ ಎಂದು ಬಾಲಕನ ತಂದೆ ಬಹಳ ಸಂತೋಷದಿಂದ, ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ವೇಳೆ ಮಗನ ಬುದ್ಧಿಶಕ್ತಿ ಎಷ್ಟಿದೆ ಎಂದು ಸಾಬೀತುಪಡಿಸಲು ಮುಂದಾದ ತಂದೆ, 'ಭಾರತದ ರಾಜಧಾನಿ ಯಾವುದು' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸದ ಬಾಲಕ, ಎಷ್ಟು ಬಾರಿ ಕೇಳಿದರೂ ಸಹ ಹೇಳದೆ ಅಪ್ಪನ ಮುಜುಗರಕ್ಕೆ ಕಾರಣನಾಗಿದ್ದಾನೆ.

ತಂದೆ-ಮಗನ ಈ ಪ್ರಶ್ನೆ-ಉತ್ತರ ದೃಶ್ಯ ಅಲ್ಲೇ ಇದ್ದ ಪತ್ರಕರ್ತರ ಕ್ಯಾಮರಾದಲ್ಲಿ ಸೆರೆಯಾಗಿದೆ.  ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿವೆ,(ಏಜೆನ್ಸೀಸ್).