

ಬೆಂಗಳೂರು: ಮಹಾನಗರದಲ್ಲಿ ಉಮಟಾಗಿರುವ ರಸ್ತೆಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ಬಿಬಿಎಂಪಿಯು
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ಸಲವಾಗಿದೆ.
ಬುಧವಾರ ಪಂತರಪಾಳ್ಯ - ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಉಂಟಾಗಿದ್ದ ರಸ್ತೆಗುಂಡಿಯನ್ನು ಹೊಸ ಯಂತ್ರದ ಮೂಲಕ ಅಧಿಕಾರಿಗಳ ಸಮ್ಮುಖದಲ್ಲಿ ದುರಸ್ತಿಗೊಳಿಸಲಾಯಿತು. ತ್ವರಿತವಾಗಿ ಗುಂಡಿ ಮುಚ್ಚುವುದಲ್ಲದೆ ಮತ್ತೆ ಗುಂಡಿ ಉಂಟಾಗದಂತೆ ಈ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಆರ್. ನಗರ ವಲಯ ಆಯುಕ್ತ ಅಜಯ್, ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚಬಹುದಾಗಿದೆ. ಒಂದು ಬಾರಿಗೆ 150 ರಿಂದ 180 ಚ.ಮೀ. ಅಗಲದ ಗುಂಡಿಗಳನ್ನು ಮುಚ್ಚಬಹುದಾಗಿದೆ. ಗುಂಡಿ ಮುಚ್ಚಿದ ಕೂಡಲೆ ವಾಹನಗಳು ಅದರ ಮೇಲೆ ಸರಾಗವಾಗಿ ಸಂಚಾರ ಮಾಡಬಹುದಾಗಿದೆ ಎಂದು ತಿಳಿಸಿದರು.
2,408 ಗುಂಡಿಗಳಿಗೆ ಮುಕ್ತಿ:
ಆರ್.ಆರ್.ನಗರ ವಲಯ ವ್ಯಾಪ್ತಿಯ 20 ವಾರ್ಡ್ಗಳಲ್ಲಿ ಕಳೆದ ಮೇ ತಿಂಗಳಿನಿಂದ ಇದುವರೆಗೆ 2,443 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 2,408 ರಸ್ತೆಗುಂಡಿಗಳನ್ನು ಈಗಾಗಲೇ ಮುಚ್ಚಿದ್ದು, 35 ಗುಂಡಿಗಳು ಬಾಕಿ ಇವೆ. ರಸ್ತೆಗುಂಡಿ ‘ಗಮನ’ ತಂತ್ರಾಂಶದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿದ್ದು, 86 ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿ 302 ರಸ್ತೆಗುಂಡಿಗಳನ್ನು ಶೀಘ್ರ ದುರಸ್ತಿಗೊಳಿಸಲಾಗುವುದು ಎಂದು ಅಜಯ್ ವಿವರಿಸಿದರು.
ಸ್ಥಳಪರಿಶೀಲನೆ ವೇಳೆ ಆರ್.ಆರ್.ನಗರ ವಲಯದ ಮುಖ್ಯ ಅಭಿಯಂತರ ಸ್ವಯಂಪ್ರಭಾ, ಕಾರ್ಯಪಾಲಕ ಅಭಿಯಂತರ ಪಾಪರೆಡ್ಡಿ, ಆರ್ಿ ಸೇರಿ ಇನ್ನಿತರ ಅಧಿಕಾರಿಗಳು ಇದ್ದರು.
ಆರ್.ಆರ್.ನಗರ ವಲಯ ರಸ್ತೆಗಳ ವಿವರ:
* ರಸ್ತೆಗಳ ಒಟ್ಟು ವಿಸ್ತೀರ್ಣ: 112.01 ಚ. ಕಿ.ಮೀ.
* ವಾರ್ಡ್ ರಸ್ತೆಗಳ ಸಂಖ್ಯೆ: 11,367
* ವಾರ್ಡ್ ರಸ್ತೆಗಳ ಉದ್ದ: 1,829.44 ಕಿ.ಮೀ.
* ಪ್ರಮುಖ ರಸ್ತೆಗಳ ಸಂಖ್ಯೆ: 44
* ಪ್ರಮುಖ ರಸ್ತೆಗಳ ಉದ್ದ: 216.45
* ವಲಯದ ರಸ್ತೆಗಳ ಒಟ್ಟು ಉದ್ದ: 2.045.89 ಕಿ.ಮೀ.