ನ್ಯೂಸ್

ಹಸಿದ ಹಾವು ಮಾಡಿದ್ದೇನು? ಅದರ ಹೊಟ್ಟೆಯಿಂದ ಹೊರಬಂದ ವಸ್ತು ನೋಡಿದ್ರೆ ಹೌಹಾರ್ತೀರಾ? | Snake

ಬೆಂಗಳೂರು: ಹಾವು(Snake)ಗಳು ಸಾಮಾನ್ಯವಾಗಿ ಕಪ್ಪೆ, ಇಲಿ ಮತ್ತಿತರ ಜೀವಿಗಳು ಮತ್ತು ಮೊಟ್ಟೆಗಳನ್ನು ತಿನ್ನುತ್ತವೆ. ಇಲ್ಲೊಂದು ಹಸಿದ ಹಾವು ಮೊಟ್ಟೆ ಜೊತೆ ಒಂದು ಅಡಿಗೂ ಇದ್ದದ ಪಿವಿಸಿ ಪೈಪ್​ ನುಂಗಿದೆ. ಕೊನೆಗೆ ಇನ್ನಿಲ್ಲದ ತೊಂದರೆ ಅನುಭವಿಸಿದೆ. ಕಡೆಗೆ ಹಾವು ಪರದಾಟ ಕಂಡ ಜನರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಪೈಪನ್ನು ಹೊರತೆಗಿಸಿ ನೆರವಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಹಾವು ಮನೆಯೊಂದರ ಬಳಿ ಬಂದು ಮೊಟ್ಟೆ ನೋಡುತ್ತದೆ. ಆದರೆ ಅದು ಪ್ಲಾಸ್ಟಿಕ್​ ಪೈಪಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆದರೆ ಅದನ್ನು ಹೇಗೆ ತಿನ್ನಬೇಕೆಂದು ತಿಳಿಯದೆ ಮೊಟ್ಟೆಯ ಜೊತೆಗೆ ಪೈಪನ್ನೂ ನುಂಗಿಬಿಟ್ಟಿದೆ.

ಇದನ್ನೂ ಓದಿ:

ಆದರೆ ಪ್ಟಾಸ್ಟಿಕ್ ಪೈಪ್ ಹೊಟ್ಟೆಯೊಳಗೆ ಹೋದಾಗ ಹಾವಿಗೆ ತುಂಬಾ ತೊಂದರೆಯಾಗಿದೆ. ಮನೆಯಲ್ಲಿದ್ದವರು ಈ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಹಾವು ಹಿಡಿಯುವವನು ಬಹಳ ಜಾಣ್ಮೆಯಿಂದ ಹಾವನ್ನು ಹಿಡಿದು ಹೊರಗೆ ತಂದಿದ್ದು, ಹಾವಿನ ಬಾಲವನ್ನು ಹಿಡಿದು ತಲೆಕೆಳಗಾಗಿ ಮಾಡಿ ಹೊಟ್ಟೆಯಲ್ಲಿದ್ದ ಪೈಪನ್ನು ಬಲವಂತವಾಗಿ ಹೊರ ಬರುವಂತೆ ಮಾಡಿದ್ದಾನೆ. ಕೊನೆಗೆ ಮೊಟ್ಟೆಯ ಜೊತೆಗೆ ದೊಡ್ಡ ಪೈಪೊಂದು ಹೊರಬಂದಿದೆ. ಅಲ್ಲಿದ್ದವರೆಲ್ಲ ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

74 ಸಾವಿರ ಲೈಕ್ಸ್​: Snake

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. "ಅಯ್ಯೋ, ಇಂತಹ ದೃಶ್ಯವನ್ನು ನಾವು ಮೊದಲ ಬಾರಿಗೆ ನೋಡುತ್ತಿದ್ದೇವೆ" ಎಂದು ಕೆಲವರು ಹೇಳಿದರೆ, ಇನ್ನು ಕೆಲವರು "ಈ ಹಾವು ತುಂಬಾ ವಿಚಿತ್ರವಾಗಿದೆ" ಎಂದು ಹೇಳಿದ್ದಾರೆ. ಈ ವೀಡಿಯೊ ಪ್ರಸ್ತುತ 74 ಸಾವಿರಕ್ಕೂ ಹೆಚ್ಚು ಇಷ್ಟಗಳು ಮತ್ತು 4.2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.