ತೆಲಂಗಾಣ: ಹಾವುಗಳು ಯಾವ ಸಂದರ್ಭದಲ್ಲಿ, ಎಲ್ಲಿ ಪ್ರತ್ಯಕ್ಷವಾಗತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಒಮ್ಮಿಂದೊಮ್ಮೆಲೆ ಹಾವು ಕಾಣಿಸಿಕೊಂಡರೆ ಎಂತಹ ಧೈರ್ಯವಂತನಿಗಾದರೂ ಒಂದು ಕ್ಷಣ ಭಯವಾಗುತ್ತದೆ. ಇದೀಗ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಂಡು ಎಲ್ಲರನ್ನು ಭಯ ಬೀಳಿಸಿದೆ.
ಆಸ್ಪತ್ರೆಯ ಪುರಷರ ವಾರ್ಡ್ನಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ಹಾವು ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ತಿಂಗಳಿನಲ್ಲಿ ನಾಗರ ಹಾವು ಇದು ಎರಡನೇ ಬಾರಿಗೆ ಬಂದಿರುವುದು ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.
ಆಸ್ಪತ್ರೆಯಲ್ಲಿ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ವಾರ್ಡ್ನಲ್ಲಿದ್ದ ಎಲ್ಲರೂ ಭಯ ಬಿದ್ದಿದ್ದಾರೆ. ಕೂಡಲೇ ಎಚ್ಚೆತ್ತ ರೋಗಿಗಳು ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)