ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣದ ಎಸ್‌ಐಟಿ ಮುಖ್ಯಸ್ಥ ಮತ್ತು ಬೆಂಗಳೂರು ನಗರ (ಪಶ್ಚಿಮ) ಹೆಚ್ಚುವರಿ ಆಯುಕ್ತ ಸೌಮೆಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆ ಪಡೆದಿದ್ದಾರೆ.
ಆರೋಗ್ಯ ಕಾರಣಕ್ಕೆ 20 ದಿನಗಳಿಂದ ರಜೆಯಲ್ಲಿದ್ದ ಸೌಮೆಂದು ಮುಖರ್ಜಿ, ಮತ್ತೆ ರಜೆಯನ್ನು ವಿಸ್ತರಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಸಚಿವರ ಲೈಂಗಿಕ ಹಗರಣ ಪ್ರಕರಣದ ತನಿಖೆಯಲ್ಲಿ ಕೆಲವರ ಹಸ್ತಕ್ಷೇಪದಿಂದ ಬೇಸರಗೊಂಡು ದೂರ ಸರಿದಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಎಸ್‌ಐಟಿ ಮುಖ್ಯಸ್ಥರ ರಜೆ ಅವಧಿಯಲ್ಲಿ ಪ್ರಮುಖ ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ವಿಚಾರಣೆ ನಡೆದಿತ್ತು. ಆದರೆ, ತನಿಖೆಗೂ, ರಜೆಗೂ ಸಂಬಂಧ ಇಲ್ಲವೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.