ಈಗಾಗಲೇ ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು ಮುಚ್ಚಲ್ಪಟ್ಟಿವೆ. ಕಲೆದ ಆರು ತಿಂಗಳಿಂದ ಸಿನಿಮಾ ಪ್ರದರ್ಶನವಾಗಿಲ್ಲ. ಕರೊನಾ ಹಾವಳಿ ಹತೋಟಿಗೆ ಬಂದ ನಂತರವೇ ಸಿನಿಮಾ ಪ್ರದರ್ಶನ ಸಾಧ್ಯ. ಹೀಗಿರುವಾಗಲೇ ಹೊರದೇಶಗಳಲ್ಲಿ ಕರೊನಾ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ.
ಇದನ್ನೂ ಓದಿ: ಕೊನೆಗೂ ಕೊಟ್ಟ ಮಾತು ಉಳಿಸಿಕೊಂಡ ಸಲ್ಮಾನ್ ಖಾನ್…
ರಣವೀರ್ ಸಿಂಗ್ ನಾಯಕತ್ವದ ಸಿಂಬಾ ಮತ್ತು ಅಜಯ್ ದೇವಗನ್ ನಟನೆಯ ಗೊಲ್ಮಾಲ್ ಅಗೇನ್ ಸಿನಿಮಾಗಳು ಮರುಬಿಡುಗಡೆಗೆ ಪ್ಲಾನ್ ಮಾಡಿಕೊಂಡಿವೆ. ಹಾಗಂತ ಭಾರತದಲ್ಲಿ ಅಲ್ಲ, ದೂರದ ಅಮೆರಿಕದಲ್ಲಿ ಈ ಸಿನಿಮಾಗಳು ರೀ ರಿಲೀಸ್ ಆಗಲಿವೆ.
ಈ ವಿಚಾರವನ್ನು ರಿಲಯನ್ಸ್ ಎಂಟರ್ಟೈನ್ಮೆಂಟ್ ಅಧಿಕೃತವಾಗಿ ಟ್ವಿಟರ್ನಲ್ಲಿ ಘೋಷಣೆ ಮಾಡಿಕೊಂಡಿದ್ದು, ಆಗಸ್ಟ್ 28ರಿಂದ ಸಿಂಬಾ ಪ್ರದರ್ಶನ ಶುರುವಾಗಿದೆಯಂತೆ. ವರ್ಜಿನಿಯಾದ ರಿಗಲ್ ವರ್ಜಿನಿಯಾ ಸೆಂಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ.
2018ರ ಡಿಸೆಂಬರ್ನಲ್ಲಿ ತೆರೆಕಂಡಿದ್ದ ಸಿಂಬಾ ಸೂಪರ್ ಹಿಟ್ ಪಟ್ಟಿ ಸೇರುವುದರ ಜತೆಗೆ ಬಾಕ್ಸ್ಆಫೀಸ್ನಲ್ಲಿ ಒಳ್ಳೇ ಕಮಾಯಿ ಮಾಡಿತ್ತು. ಅದೇ ರೀತಿ ಗೋಲ್ಮಾಲ್ ಅಗೇನ್ ಸಹ ಶತಕೋಟಿ ಕ್ಲಬ್ಗೆ ಸೇರ್ಪಡೆಯಾಗಿತ್ತು. ಇನ್ನೊಂದು ವಿಶೇಷ ಏನೆಂದರೆ ಈ ಎರಡು ಸಿನಿಮಾ ನಿರ್ದೇಶನ ಮಾಡಿದ್ದು ರೋಹಿತ್ ಶೆಟ್ಟಿ. (ಏಜೆನ್ಸೀಸ್)