Sikh Soldiers : ಭಾರತ ಪಾಕಿಸ್ತಾನ ವಿರುದ್ಧ ದಾಳಿ ಮಾಡಿದ್ರೆ ದೇಶಕ್ಕಾಗಿ ಹೋರಾಡಬೇಡಿ ಎಂದು ಖಲಿಸ್ತಾನ ಪರ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ಸೇನೆಯಲ್ಲಿನ ಸಿಖ್ ಸೈನಿಕರಿಗೆ ಕರೆ ನೀಡಿದ್ದಾರೆ.
"ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಮೋದಿಗೆ ಅಂತಿಮ ಯುದ್ಧವಾಗಿರುತ್ತದೆ. ಭಾರತದ ಕಡೆಯ ಪಂಜಾಬಿಗಳು ಪಾಕಿಸ್ತಾನಿ ಸೈನ್ಯಕ್ಕೆ ಲಂಗಾರ್ ಸೇವೆ ಸಲ್ಲಿಸುತ್ತಾರೆ" ಎಂದು ಪನ್ನು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಇದನ್ನೂ ಓದಿ:ಮೊದಲ ಡೋಸ್ ಲಸಿಕೆ ಪಡೆದ ತೋಳಿಗೆ ಮತ್ತೊಂದು ಡೋಸ್ ಪಡೆಯವುದು ಉತ್ತಮವೇ?: ಹೊಸ ಅಧ್ಯಯನ ಹೇಳಿದ್ದೇನು? | Vaccine
"ನರೇಂದ್ರ ಮೋದಿಯವರ ದೇಶಭಕ್ತಿಯ ಯುದ್ಧಕ್ಕೆ ಈಗ ಬೇಡ. ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ. ಪಾಕಿಸ್ತಾನ ನಿಮ್ಮ ಶತ್ರುವಲ್ಲ. ಪಾಕಿಸ್ತಾನ ಸಿಖ್ ಜನರಿಗೆ ಮತ್ತು ಖಲಿಸ್ತಾನಕ್ಕೆ ಸ್ನೇಹಪರ ರಾಷ್ಟ್ರವಾಗಿರುತ್ತದೆ ಮತ್ತು ಇರುತ್ತದೆ. ನಾವು ಪಂಜಾಬ್ ಅನ್ನು ಸ್ವತಂತ್ರಗೊಳಿಸಿದ ನಂತರ, ಪಾಕಿಸ್ತಾನ ನಮ್ಮ ನೆರೆಯವರಾಗಿರುತ್ತದೆ" ಎಂದು ಪ್ರತ್ಯೇಕತಾವಾದಿ ಪನ್ನು ಹೇಳಿದ್ದಾನೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ರಾಜ್ಯದ ಜಾತಿ ಗಣತಿ ವರದಿ ಗೊಂದಲಗಳಿಗೆ ಇತಿಶ್ರೀ: ವಿಜಯೇಂದ್ರ ವಿಶ್ವಾಸ | Original report missing out
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏ.22ರಂದು ಭಯೋತ್ಪಾದಕ ದಾಳಿ ನಡೆದಿದ್ದು, ಇಬ್ಬರು ವಿದೇಶಿಯರು ಸೇರಿ 26 ಜನ ಭಾರತೀಯರು ದಾಳಿಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆ ಪಾಕಿಸ್ತಾನ ಮತ್ತು ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.(ಏಜೆನ್ಸೀಸ್)