ನವದೆಹಲಿ; ಮದುವೆ ವಾರ್ಷಿಕೋತ್ಸವ ದಿನದಂದೆ ದಂಪತಿ ಸೇರಿದಂತೆ ಮಗಳು ಹತ್ಯೆಯಾಗಿರುವ ಘಟನೆ ಇಲ್ಲಿನ ದಕ್ಷಿಣ ಪ್ರಾಂತ್ಯದಲ್ಲಿ ಬುಧವಾರ(ಡಿ.04) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಶ್ ಕುಮಾರ್(51), ಇವರ ಪತ್ನಿ ಕೋಮಲಾ(46) ಮತ್ತು ಪುತ್ರಿ ಕವಿತಾ(23) ಮೃತರು. ರಾಜೇಶ್ ಕುಮಾರ್ ಮಗ ಅರ್ಜುನ್ ಬೆಳಗ್ಗೆ ಜಾಗಿಂಗ್ಗೆ ಹೋಗಿ ಮನೆಗೆ ಬಂದಾಗ(Shock) ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಕೊಲೆಯ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ಯಾವುದೇ ದರೋಡೆ, ಕಳ್ಳತನ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ,'' ಮನೆಯಲ್ಲಿ ಅವರ ಮಗ ಅರ್ಜುನ್ ಜೋರಾಗಿ ಕಿರುಚುವ ಶಬ್ಧದಿಂದ ನಾವೆಲ್ಲಾ ಓಡಿ ಬಂದೆವು. ಅವನ್ನು ವಿಚಾರಿಸಿದಾಗ ನಾನು ಜಾಗಿಂಗ್ ಹೋಗಿದ್ದೆ. ಮನೆಗೆ ಬಂದಾಗ ಅಪ್ಪ, ಅಮ್ಮ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ನೋಡಿ ಚಿರಿದೆ ಎಂದು ಹೇಳಿದ್ದಾನೆ. ಅಲ್ಲಿನ ಪರಿಸ್ಥಿತಿ ನೋಡಿದರೆ ಯಾರೋ ಕೊಲೆ ಮಾಡಿ ಓಡಿ ಹೋಗಿದ್ದಾರೆ'' ಎಂದು ಹೇಳಿದ್ದಾರೆ.
ಈ ಕುರಿತು ಪೊಲೀಸರು ಸಾವಿನ ನಿಖರ ಮಾಹಿತಿ ತಿಳಿಯಲು ತನಿಖೆ ಕೈಗೊಂಡಿದ್ದಾರೆ, (ಏಜೆನ್ಸೀಸ್).