ಶಿವಮೊಗ್ಗ: ನಿನ್ನೆ(ಗುರುವಾರ) ರಾತ್ರಿ ಹುಣಸೋಡು ಗ್ರಾಮದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್, ಡೈನಾಮಿಕ್ ತುಂಬಿದ್ದ ಲಾರಿ ಸ್ಫೋಟಗೊಂಡ ಪರಿಣಾಮ ಅಪಾರ ಪ್ರಮಾಣ ಸಾವು-ನೋವು ಸಂಭವಿಸಿದೆ. ಘಟನೆ ನಡೆದ ಸ್ಥಳದಲ್ಲಿ ಇದುವರೆಗೂ ಛಿದ್ರಛಿಧ್ರಗೊಂಡ 5 ಜನರ ಮೃತದೇಹಗಳು ಸಿಕ್ಕಿದ್ದು, ಸತ್ತಿರುವವರು ಕ್ರಷರ್ ಕಾರ್ಮಿಕರಲ್ಲ!
ಸ್ಫೋಟದ ತೀವ್ರತೆಗೆ ಇಡೀ ಪ್ರದೇಶದಲ್ಲಿ ಭೂದಿ ಆವರಿಸಿತ್ತು. ಗಬ್ಬು ವಾಸನೆ ಬರುತ್ತಿತ್ತು. ಸುತ್ತಮುತ್ತಲ ನಾಲ್ಕು ಜಿಲ್ಲೆಗೂ ಹಾನಿಯಾಗಿದ್ದು, ನೂರಾರು ಮನೆಗಳು ಬಿರುಕುಬಿಟ್ಟಿವೆ. ಸ್ಫೋಟಗೊಂಡ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದರ ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಇನ್ನು ಈ ಸ್ಫೋಟಕ್ಕೆ ಮತ್ತೆಷ್ಟು ಜನ ಬಲಿಯಾಗಿದ್ದಾರೆ ಎಂದು ಖಚಿತ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ 5 ಮೃತದೇಹಗಳು ಸಿಕ್ಕಿದ್ದು, ಅದು ಕ್ರಷರ್ ಕಾರ್ಮಿಕರದ್ದಲ್ಲ ಎನ್ನಲಾಗುತ್ತಿದೆ. ಹಾಗಿದ್ದರೆ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಲ್ಲಿ ಹೋದರು ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿರಿ ಶಿವಮೊಗ್ಗದಲ್ಲಿ ಭೀಕರ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಕ್ರಷರ್ ನಡೆಯುತ್ತಿದ್ದ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಲಾರಿಗಳ ಗಾಜು ಪುಡಿ ಪುಡಿಯಾಗಿವೆ. ಸುತ್ತ ಮುತ್ತಲ ನಿವಾಸಿಗಳ ಮನೆಯ ಬಾಗಿಲುಗಳು ಕಿತ್ತುಬಂದಿದೆ.