ನ್ಯೂಸ್

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬರಹ; ಕಾಂಗ್ರೆಸ್​ ಮುಖಂಡ ಅರೆಸ್ಟ್

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್​ ಮುಂಖಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ದೀಪಕ್ ಸಿಂಗ್ ಬಂಧಿತ. ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಟಿ.ಆರ್.ಜಗನ್ನಾಥ್ ಅವರ ದೂರಿನ ಮೇರೆಗೆ ವಿನೋಬನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯೂ ಆಗಿರುವ ದೀಪಕ್​ ಸಿಂಗ್​, ಮಹಾನಗರ ಪಾಲಿಕೆ ಮಾಜಿ ಸದ್ಯ ಕೂಡ. ತನ್ನ ಪೇಸ್​ಬುಕ್​ ಖಾತೆಯಲ್ಲಿ ಪ್ರಧಾನಿ ಬಗ್ಗೆ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಆರೋಪದ ಮೇರೆಗೆ ದೀಪಕ್ ಸಿಂಗ್​ನನ್ನು ಐಪಿಸಿ ಸೆಕ್ಷನ್ 504, 505 ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.