ನ್ಯೂಸ್

ಈಕೆಗೆ ಇನ್ನೊಬ್ಬನ ಮೇಲೆ ಲವ್.. ಮದುವೆಯಾದ ನಾಲ್ಕನೇ ದಿನಕ್ಕೆ ಪತಿಯನ್ನು ಕೊಂದ ಪತ್ನಿ! | Killed

ಗುಜರಾತ್​: ಮದುವೆಯಾದ ನಾಲ್ಕೇ ದಿನಗಳಲ್ಲಿ ನವವಿವಾಹಿತೆ, ಪತಿಯನ್ನು ಕೊಂದ(Killed) ಘಟನೆ ಇಲ್ಲಿನ ಗಾಂಧಿನಗರದಲ್ಲಿ ಶನಿವಾರ ನಡೆದಿದೆ.

ಅಹಮದಾಬಾದ್​ ನಿವಾಸಿ ಬಾವಿಕ್​ ಕೊಲೆಯಾದ ವ್ಯಕ್ತಿ. ಬಾವಿಕ್​ ಗಾಂಧಿನಗರದ ಪಾಯಲ್​ ಎಂಬಾಕೆಯನ್ನು ನಾಲ್ಕು ದಿನಗಳಿಂದೆ ಮದುವೆಯಾಗಿದ್ದನು. ಶನಿವಾರ ಮೂವರು ವ್ಯಕ್ತಿಗಳು ಅವರನ್ನು ಅಪಹರಿಸಿ ಕೊಂದಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪಾಯಲ್​ ಮದುವೆಗೂ ಮುನ್ನ ತನ್ನ ಸಹೋದರ ಸಂಬಂಧಿಯೊಬ್ಬ ಕಲ್ಪೇಶ್​ನನ್ನು ಪ್ರೀತಿಸುತ್ತಿದ್ದಳು. ಇವನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

'' ಶನಿವಾರ ಬಾವಿಕ್​​ ಪತ್ನಿ ಪಾಯಲ್​​ ಅನ್ನು ಕರೆ ತರಲು (ವಧುವಿನ ತಂದೆ) ಪಾಲಕರ ಮನೆಗೆ ಹೋಗಿದ್ದರು. ಮನೆಗೆ ತಲುಪದ ಮಗನ ಬಗ್ಗೆ ಬಾವಿಕ್​ ತಂದೆ ಪಾಯಲ್​ ಪಾಲಕರಿಗೆ ಕರೆ ಮಾಡಿದ್ದರು. ಬಾವಿಕ್​ ಮನೆಗೆ ಬಾರದ ಹಿನ್ನೆಲೆ ಪಾಲಕರೇ ನೆರವಾಗಿ ಪಾಯಲ್​ ಮನೆಗೆ ಬಂದು ವಿಚಾರಿಸಿದ್ದಾರೆ. ಬಳಿಕ ಮಗನ ಹುಟುಕಾಟ ಆರಂಭಿಸಿದ್ದಾರೆ. ಬಾವಿಕ್ ಅಪಹರಣವಾಗಿರುವುದು ಸ್ಥಳೀಯರ ತಿಳಿದುಕೊಂಡಿದ್ದಾರೆ. ನಂತರ ಮಗನ ಅಪಹರದ ಬಗ್ಗೆ ಪೊಲೀಸ್​ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ''.

'ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ''ಪಾಯಲ್​ ಮನೆಗೆ ಕರೆ ಮಾಡಿದ್ದಾರೆ. ಬಳಿಕ ಪಾಯಲ್​ ಅನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಮೇಲೆ ಕೃತ್ಯದ ಬಹಿರಂಗಗೊಂಡಿದೆ. ಕೊಲೆಗೆ ಸಂಚು ಬಗ್ಗೆ ಎಲ್ಲಾ ಮಾಹಿತಿ ಪೊಲೀಸರ ಮುಂದೆ ಬಾಯ್ ಬಿಟ್ಟಿದ್ದಾಳೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಯಲ್​ ವಶಕ್ಕೆ ಪಡೆದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್​ಗಳಡಿ ಕೊಲೆ, ಕೊಲೆಗೆ ಸಂಚು ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ,(ಏಜೆನ್ಸೀಸ್​).