ಮುಂಬೈ: ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಶರದ್ ಪವಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಾರ್ಚ್ 31ರಂದು ಶಸ್ತ್ರಚಿಕಿತ್ಸೆಗಾಗಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಪವಾರ್ ಅವರ ಪಿತ್ತಕೋಶದಲ್ಲಿ ಸಮಸ್ಯೆ ಇರುವುದನ್ನು ವೈದ್ಯರು ಪತ್ತೆಹಚ್ಚಿರುವುದಾಗಿ ಮತ್ತು ಸರ್ಜರಿಗೆ ಒಳಗಾಗಲಿದ್ದಾರೆಂದು ಎನ್ಸಿಪಿ ಮುಖಂಡ ನವಾಬ್ ಮಲ್ಲಿಕ್ ಸೋಮವಾರ ತಿಳಿಸಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪವಾರ್ ಅವರನ್ನು ಇಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಪರೀಕ್ಷಿಸಿದಾಗ ವೈದ್ಯರಿಗೆ ಪವಾರ್ ಪಿತ್ತಕೋಶದಲ್ಲಿ ಸಮಸ್ಯೆ ಇರುವುದು ಗೊತ್ತಾಗಿದೆ.
ಸದ್ಯ ಪವಾರ್ ಅವರು ರಕ್ತ ತೆಳುವಾಗುತ್ತಿರುವ ಔಷಧಿ ತೆಗೆದುಕೊಳ್ಳುತ್ತಿದ್ದು, ಪ್ರಸ್ತುತ ಸಮಸ್ಯೆಯಿಂದಾಗಿ ಔಷಧವನ್ನು ನಿಲ್ಲಿಸಲಾಗುತ್ತಿದೆ. ಮಾರ್ಚ್ 31ರಂದು ಸರ್ಜರಿಗಾಗಿ ಪವಾರ್ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ನವಾಬ್ ಮಲ್ಲಿಕ್ ಹೇಳಿದರು. (ಏಜೆನ್ಸೀಸ್)